ಇತ್ತೀಚೆಗೆ ಹಲವಾರು ಚಿತ್ರಗಳು ಹಾರಾರ್ ರೂಪದಲ್ಲಿ ಬರುತ್ತಿವೆ. ಈ ಮಧ್ಯೆ ಭೂಲ್ ಭುಲಯ್ಯ 3 ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ಕೆಲವೇ ದಿನಗಳ ಹಿಂದೆ ಬಂದಿದ್ದ ಟೀಸರ್ ನಲ್ಲಿ ಹಾರರ್ ದೃಶ್ಯಗಳು ಇದ್ದವು. ವಿದ್ಯಾ ಬಾಲನ್, ಕಾರ್ತಿಕ್ ಆರ್ಯನ್, ಮಾಧುರಿ ದೀಕ್ಷಿತ್, ತೃಪ್ತಿ ದಿಮ್ರಿ ಸೇರಿದಂತೆ ಹಲವರು ನಟಿಸಿದ್ದಾರೆ. ಈ ವರ್ಷ ದೀಪಾವಳಿ ಪ್ರಯುಕ್ತ ‘ಭೂಲ್ ಭುಲಯ್ಯ 3’ ಸಿನಿಮಾ ಬಿಡುಗಡೆ ಆಗಲಿದೆ. ಟ್ರೇಲರ್ ನೋಡಿ ಚಿತ್ರ ನೋಡಲು ಜನ ಕಾತುರದಿಂದ ಕಾಯುತ್ತಿದ್ದಾರೆ.
ಭೂಲ್ ಭುಲಯ್ಯ’ ಮತ್ತು ‘ಭೂಲ್ ಭುಲಯ್ಯ 2’ ಸಿನಿಮಾದಲ್ಲಿ ಮಂಜುಳಿಕಾ ಎಂಬ ಪಾತ್ರ ಹೈಲೈಟ್ ಆಗಿತ್ತು. ಈಗ ‘ಭೂಲ್ ಭುಲಯ್ಯ 3’ ಸಿನಿಮಾದಲ್ಲೂ ಆ ಪಾತ್ರವೇ ಪ್ರಧಾನವಾಗಿ ಕಾಣಲಿದೆ. ಈ ಬಾರಿ ಮಂಜುಳಿಕಾ ಪಾತ್ರವನ್ನು ಇಬ್ಬರು ಮಾಡಿದ್ದಾರೆ. ಮಾಧುರಿ ದೀಕ್ಷಿತ್ ಮತ್ತು ವಿದ್ಯಾ ಬಾಲನ್ ಅವರು ಮಂಜುಳಿಕಾ ಆಗಿ ಕಾಣಿಸಿಕೊಂಡಿದ್ದಾರೆ.
ಮಾಧುರಿ ದೀಕ್ಷಿತ್ ಮತ್ತು ವಿದ್ಯಾ ಬಾಲನ್ ಅವರಲ್ಲಿ ನಿಜವಾದ ಮಂಜುಳಿಕಾ ಯಾರು ಎಂಬುದು ತಿಳಿಯಲು ಅಭಿಮಾನಿಗಳು ‘ಭೂಲ್ ಭುಲಯ್ಯ 3’ ಸಿನಿಮಾವನ್ನು ನೋಡಬೇಕು. ಅನೀಸ್ ಬಾಜ್ಮಿ ನಿರ್ದೇಶನ ಮಾಡಿದ್ದಾರೆ. ನವೆಂಬರ್ 1ರಂದು ಈ ಚಿತ್ರ ಬಿಡುಗಡೆ ಆಗಲಿದೆ.