ಬೆಂಗಳೂರು: ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ ಸೀರಿಯಲ್ ಮುಖಾಂತರ ಎಲ್ಲರಿಗೂ ಕೂಡ ಚಿರಪರಿಚಿತರಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಅವರ ಜೊತೆ ಭವ್ಯ ಗೌಡ ಅವರು ಸದಾ ಟ್ರೋಲ್ ಆಗುತ್ತಿದ್ದರು.
ಇದಾದ ಬಳಿಕ ಬಿಗ್ ಬಾಸ್ ನಿಂದ ಆಚೆ ಬಂದ ನಂತರ ಮತ್ತೊಂದು ವಿಚಾರಕ್ಕೆ ಭವ್ಯ ಗೌಡ ಸುದ್ದಿಯಲ್ಲಿದ್ದಾರೆ. ಅದೇನೆಂದರೆ ಭವ್ಯಾಗೌಡ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕರ್ಣ ಎನ್ನುವಂತಹ ಸೀರಿಯಲ್ ನಲ್ಲಿ ಕಿರಣ್ ರಾಜ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಸೀರಿಯಲ್ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು, ಖ್ಯಾತ ನಟ ಕಿರಣ್ ರಾಜ್ ಅವರು ಹೀರೋ ಆಗಿ ಮಿಂಚಲಿದ್ದಾರೆ. ಈಗಾಗಲೇ ಕರ್ಣ ಧಾರವಾಹಿಯ ಪ್ರೊಮೋ ಶೂಟ್ನಲ್ಲಿ ಭವ್ಯ ಗೌಡ ಭಾಗ್ಯವಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ.