ನಟಿ ಭಾವನಾ ರಾಮಣ್ಣ ಬೋಲ್ಡ್ ಹೆಜ್ಜೆ ಇಟ್ಟಿದ್ದಾರೆ. ಮದುವೆಯಾಗದೆ, ಸಂಗಾತಿ ಇಲ್ಲದೆ, ಐವಿಎಫ್ ಮುಖಾಂತರ ಭಾವನಾ ರಾಮಣ್ಣ ಗರ್ಭ ಧರಿಸಿದ್ದಾರೆ. ಅವಳಿ ಮಕ್ಕಳಿಗೆ ಭಾವನಾ ರಾಮಣ್ಣ ತಾಯಿಯಾಗುತ್ತಿದ್ದಾರೆ. ಸದ್ಯ 6 ತಿಂಗಳ ತುಂಬು ಗರ್ಭಿಣಿಯಾಗಿರುವ ಭಾವನಾ ರಾಮಣ್ಣ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಟ್ವಿನ್ಸ್‌ಗೆ ಜನ್ಮ ನೀಡಲಿದ್ದಾರೆ. ಹೀಗಿರುವಾಗಲೇ, ವೀರ್ಯ ದಾನಿ ಬಗ್ಗೆ ಸಂದರ್ಶನವೊಂದರಲ್ಲಿ ನಟಿ ಭಾವನಾ ರಾಮಣ್ಣ ಮುಕ್ತವಾಗಿ ಮಾತನಾಡಿದ್ದಾರೆ.
‘’ಡೋನರ್‌ಗೆ ಕೆಲವು ನಿಯಮಗಳಿವೆ. ಮಹಿಳಾ ಡೋನರ್‌ಗಳೂ ಇದ್ದಾರೆ. ಪುರುಷ ಡೋನರ್‌ಗಳೂ ಇದ್ದಾರೆ. ದಾನ ಪಡೆಯುವ ಮುನ್ನ ಎಲ್ಲಾ ರೀತಿಯ ಬ್ಲಡ್ ಟೆಸ್ಟ್ ಮಾಡಲಾಗುತ್ತದೆ. ಅದರ ಜೊತೆಗೆ ಕ್ರಿಮಿನಲ್ ಬ್ಯಾಕ್‌ಗ್ರೌಂಡ್ ಅನ್ನೂ ಚೆಕ್ ಮಾಡಲಾಗುತ್ತದೆ. ದಾನಿಯ ಆಯ್ಕೆ ವೇಳೆ ವಯಸ್ಸು, ದೈಹಿಕ ಹಾಗೂ ಮಾನಸಿಕ ಆರೋಗ್ಯ, ಶೈಕ್ಷಣಿಕ ಹಿನ್ನಲೆ, ವಿದ್ಯಾರ್ಹತೆ ಬಗ್ಗೆ ಹೆಚ್ಚಿನ ಮಹತ್ವ ಕೊಡಲಾಗುತ್ತದೆ’’ ಎಂದು ಸಂದರ್ಶನದಲ್ಲಿ ಭಾವನಾ ರಾಮಣ್ಣ ಹೇಳಿದ್ದಾರೆ.
ನಾನು ವೀರ್ಯ ದಾನಿಯನ್ನ ಆಯ್ಕೆ ಮಾಡಲಿಲ್ಲ. ನಾನು ನೇರವಾಗಿ ವೈದ್ಯರನ್ನು ನಂಬಿದೆ. ಆಹಾರ ಅಭ್ಯಾಸ, ಜೀನ್ಸ್ ಒಂದೇ ರೀತಿ ಇರುತ್ತದೆ ಎಂಬ ಕಾರಣಕ್ಕೆ ದಕ್ಷಿಣ ಭಾರತದವರೇ ಇರಲಿ ಎಂದು ವೈದ್ಯರಿಗೆ ಹೇಳಿದ್ದೆ ಅಷ್ಟೇ’’ ಎಂದು ಭಾವನಾ ತಿಳಿಸಿದ್ದಾರೆ.