ಬಳ್ಳಾರಿ: ಬಳ್ಳಾರಿಯಲ್ಲಿ ದೌಲ ಎಂಬ ಗಾಂಜಾ ಪೆಡ್ಲರ್ ಇದ್ದಾನೆ. ಈತ ದಿನಕ್ಕೆ 50 ಕೆ.ಜಿ ಗಾಂಜಾ ಮಾರಾಟ ಮಾಡುತ್ತಾನೆ. ಭರತ್ ರೆಡ್ಡಿ ದೌಲನಿಗೆ ಗಾಂಜಾ ಕಾಂಟ್ರ್ಯಾಕ್ಟ್ ಕೊಟ್ಟಿದ್ದಾನೆ ಎಂದು ಶಾಸಕ ಜನಾರ್ಧನರೆಡ್ಡಿ ಆರೋಪಿಸಿದ್ದಾರೆ.
ಇಂದು ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ಧನರೆಡ್ಡಿ, ದೌಲನಿಗೆ ಭರತ್ ರೆಡ್ಡಿಯ ರಕ್ಷಣೆ ಇದೆ ಹಾಗಾಗಿ ಅವನು ಸಿಟಿಯ ವಾರ್ಡ್ ವಾರ್ಡ್ಗಳಲ್ಲಿ ಗಾಂಜಾ ಸಪ್ಲೈ ಮಾಡುತ್ತಾನೆ. ಡಿಪಾರ್ಟ್ಮೆಂಟ್ ಎಲ್ಲಾ ಒಂದಾಗಿ, ದೌಲನಿಂದ ಗಾಂಜಾ ಸೇಲ್ ಮಾಡಿಸುತ್ತಾ ಇದೆ. ಇದರಲ್ಲಿ ಭರತ್ ರೆಡ್ಡಿಗೂ ಪಾಲಿದೆ ಎಂದು ತಿಳಿಸಿದ್ದಾರೆ.
ಸಣ್ಣ ವಯಸ್ಸಿಗೆ ಭಗವಂತ ಭರತ್ ರೆಡ್ಡಿಗೆ ಶಾಸಕನಾಗೋ ಅವಕಾಶ ಕೊಟ್ಟಿದ್ದಾನೆ. ಎಲ್ಲಾ ಒಳ್ಳೆಯದಾಗುತ್ತೆ ಎನ್ನುವ ಟೈಮ್ನಲ್ಲಿ ಈ ರೀತಿ ಮಾಡ್ತಿದ್ದಾನೆ. ತಂದೆಯ ಗುಣ ಮಕ್ಕಳಿಗೆ ಬರುತ್ತೆ ಎಂದಿದ್ದೆ, ಅವರ ತಂದೆ ನಕ್ಸಲೈಟ್ಸ್ಗಳಿಗೆ ಗನ್ ಕೊಟ್ಟಿದ್ದರೂ, ಅವರ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದರೂ, ತಂದೆಯ ಗುಣ ಮಗನಿಗೂ ಬಂದಿದೆ. ಕ್ರಿಮಿನಲ್ ಚಟುವಟಿಕೆಗಳಿಂದ ಜಿಲ್ಲೆಗೆ ಮಾರಕ. ಭರತ್ ರೆಡ್ಡಿ ಮುಂದೆ ಬಲಿಷ್ಠವಾದರೆ ರಾಜ್ಯಕ್ಕೆ ಅಪಾಯಕಾರಿ ಆಗುತ್ತಾನೆ ಎಂದು ಕಿಡಿಕಾರಿದ್ದಾರೆ.
ಗಾಂಜಾ ಪೆಡ್ಲರ್ ದೌಲನ ಮೇಲೆ ಈಗಾಗಲೇ 50 ರಿಂದ 60 ಕೇಸ್ ಇದೆ. ಇಂಟರ್ನ್ಯಾಷನಲ್ ಡ್ರಗ್ ಪೆಡ್ಲರ್ ಹಂತಕ್ಕೆ ಬೆಳೆಸಲು ಭರತ್ ರೆಡ್ಡಿ ಮುಂದಾಗಿದ್ದಾರೆ. ಗಾಂಜಾ ಪೆಡ್ಲರ್ ದೌಲ ಎಲ್ಲೆಡೆ ಗಾಂಜಾ ಸಪ್ಲೈ ಮಾಡಲು ರೆಡಿ ಆಗಿದ್ದಾನೆ. ಮನೆ ಮುಂದಿನ ಬ್ಯಾನರ್ ಗಲಾಟೆಯಲ್ಲಿ ಬ್ಲಾಕ್ ಮಹೀಂದ್ರಾ ಥಾರ್ನಲ್ಲಿ ಕಲ್ಲು, ಕಟ್ಟಿಗೆ ತಂದಿರೋ ಬಗ್ಗೆ ದೂರು ಕೊಟ್ಟಿದ್ದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ದೂರಿದ್ದಾರೆ.
ಇದನ್ನೂ ಓದಿ: ಗಣರಾಜ್ಯೋತ್ಸವ | ರಾಜ್ಯದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ, 22 ಮಂದಿಗೆ ಸೇವಾ ಪದಕ



















