ಉದುಪಿ: ಕುಂದಾಪುರದ ಪ್ರತಿಷ್ಠಿತ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕಳೆದ 50 ವರ್ಷಗಳಿಂದ ನ.1ರಂದು ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ ನಡೆಯುತ್ತಿದ್ದು, ಈ ಬಾರಿ ಅದರ ಸುವರ್ಣ ಮಹೋತ್ಸವ ಪ್ರಯುಕ್ತ ʼಸುವರ್ಣಾಕ್ಷʼ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಅದ್ಧೂರಿ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ವಿಚಾರಗೋಷ್ಠಿ, ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆ, ಹೂವಿನಕೋಲು ಪ್ರದರ್ಶನ, ಆವರ್ತ ಯಕ್ಷ ವೇದಿಕೆ ಮದ್ದಳೆವಾದಕ ಎನ್.ಜಿ. ಹೆಗಡೆ ಅವರಿಗೆ ಡಾ|ಶಾಂತಾರಾಮ್ ಪುರಸ್ಕಾರ ಮತ್ತು ಯಕ್ಷಗಾನ ವಸ್ತು ಸಂಗ್ರಹಾಲಯದ ಉದ್ಘಾಟನೆ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ.
ಇನ್ನು, ನ.2ರಂದು ಬೆಳಗ್ಗೆ 9-30ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿದ್ಯಾರ್ಥಿಗಳಿಗೆ ʼಬಂಗಾರದ ಹೆಜ್ಜೆʼ ಎಂಬ ಅಂತರ್ ಕಾಲೇಜು ಬಡಗುತಿಟ್ಟು ಯಕ್ಷಗಾನ ಸ್ಪರ್ಧೆ ಆಯೋಜಿಸಲಾಗಿದ್ದು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಅ.28ರಂದು ಆಂಧ್ರ ಕರಾವಳಿಗೆ ‘ಮೋಂತಾ’ ಚಂಡಮಾರುತದ ಅಪ್ಪಳಿಸುವ ಸಾಧ್ಯತೆ: ಒಡಿಶಾ, ತಮಿಳುನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ



















