ಬೆಂಗಳೂರು: ಇತ್ತೀಚೆಗೆ ಸೈಬರ್ (Cyber Crime) ವಂಚಕರ ಹಾವಳಿ ಹೆಚ್ಚಾಗುತ್ತಿದ್ದು, ಸ್ವಲ್ಪ ಯಾಮಾರಿದರೂ ಹಣ ಬೇರೆಯವರ ಪಾಲಾಗುತ್ತಿದೆ.
ಹೊಸ ಹೊಸ ಹಾದಿ ಹಿಡಿಯುತ್ತಿರುವ ಖದೀಮರು ಕೋಟಿ ಕೋಟಿ ಹಣ ಸುಲಿಗೆ (Digital Arrest) ಮಾಡುತ್ತಿದ್ದಾರೆ. ವಿದೇಶದಲ್ಲೇ ಕುಳಿತು, ಭಾರತೀಯರ ಖಾತೆಯಲ್ಲಿನ ಹಣ ಗುಳುಂ (Foreign Persons) ಮಾಡುತ್ತಿದ್ದಾರೆ.
ಸೈಬರ್ ವಂಚಕರ ಭಯ
ಅದರಲ್ಲೂ ಸಿಲಿಕಾನ್ ಸಿಟಿಯಂತೂ ಸೈಬರ್ ವಂಚಕರ ಹಾಟ್ ಸ್ಪಾಟ್ ಆಗಿದೆ. ಸಿಲಿಕಾನ್ ಸಿಟಿಯಲ್ಲಿ(Silicon City) ಕೇವಲ 20 ದಿನಗಳಲ್ಲಿ ಬರೋಬ್ಬರಿ 950 ಸೈಬರ್ ವಂಚನೆಯ ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ ಆನ್ ಲೈನ್ ವಂಚಕರು ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಇತ್ತೀಚಿಗಷ್ಟೆ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಟೆಕ್ಕಿಯೊಬ್ಬನ ಬಳಿ 11 ಕೋಟಿ ಸುಲಿಗೆ ಮಾಡಿದ್ದರು. ವೈಟ್ ಫೀಲ್ಡ್ ನಲ್ಲಿ ಟೆಕ್ಕಿಯೊಬ್ಬರಿಗೆ ಮೊಬೈಲ್ ಪೋನ್ ಗಿಫ್ಟ್ ಕಳುಹಿಸಿ ಹಣ ಎಗರಿಸಿದ್ದರು.
ಯಲಹಂಕ ಬಳಿ ಟೆಕ್ಕಿಯನ್ನು ಡಿಜಿಟಲ್ ಅರೆಸ್ಟ್ (Digital arrest) ಮಾಡಿದ್ದ ಖದೀಮರು 11 ಕೋಟಿ ಸುಲಿಗೆ ಮಾಡಿದ್ದರು. ಇಂತಹ ವಂಚನೆ ಪ್ರಕರಣಗಳ ಹಿಂದೆ ಸೈಬರ್ ಕ್ರಿಮಿನಲ್ ಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. 2025ರ ಜನವರಿ 20 ರೊಳಗೆ ಸುಮಾರು 950 ಜನರು ಸೈಬರ್ ವಂಚನೆ(Cyber fraud) ಪ್ರಕರಣಗಳು ಈಗ ದಾಖಲಾಗಿವೆ. ಬಹುತೇಕ ಪ್ರಕರಣಗಳಲ್ಲಿ ಡಿಜಿಟಲ್ ಅರೆಸ್ಟ್, ಗಿಫ್ಟ್ ವೋಚರ್, ಎಪಿಕೆ ಫೈಲ್ ಹೀಗೆ ನಾನಾ ಅವತಾರದಲ್ಲಿ ಮೋಸ ಮಾಡಿರುವುದು ಕಂಡು ಬಂದಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರುವಂತೆ ಪೊಲೀಸರು(police) ತಿಳಿಸುತ್ತಲೇ ಇದ್ದಾರೆ. ಇದಕ್ಕಾಗಿ ಜಾಗೃತಿ (Awareness) ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.