ಆಂಧ್ರಪ್ರದೇಶದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಂತೆ ಚುನಾವಣಾ ಬೆಟ್ಟಿಂಗ್ ನಡೆದು ಮಹಿಳೆಯೊಬ್ಬರು 5 ವರ್ಷಗಳ ನಂತರ ಗ್ರಾಮಕ್ಕೆ ಮರಳಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ಖಮ್ಮಂ ಜಿಲ್ಲೆಯ ಕೇಶ್ವಾಪುರಂ ಎಂಬಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 2019ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇಬ್ಬರು ಕುಟುಂಬಸ್ಥರ ಮಧ್ಯೆ ಬೆಟ್ಟಿಂಗ್ ನಡೆದಿದೆ. ಇಬ್ಬರೂ ಬೇರೆ ಬೇರೆ ಪಕ್ಷದ ನಾಯಕರ ಗೆಲುವಿಗೆ ಬೆಟ್ಟಿಂಗ್ ಕಟ್ಟಿದ್ದಾರೆ. ಆ ವೇಳೆ ತಮ್ಮ ನಾಯಕ ಯಶಸ್ವಿಯಾಗದಿದ್ದರೆ, ತನ್ನ ನಾಯಕ ಯಶಸ್ವಿಯಾಗುವವರೆಗೂ ತಾನು ಹಳ್ಳಿಗೆ ಕಾಲಿಡುವುದಿಲ್ಲ ಎಂದು ವಿಜಯಲಕ್ಷ್ಮೀ ಶಪಥ್ ಮಾಡಿದ್ದರು. ಅವರು ಒಂದೊಮ್ಮೆ ಚಂದ್ರಬಾಬು ನಾಯ್ಡು ಅವರು ಚುನಾವಣೆಯಲ್ಲಿ ಗೆಲ್ಲದಿದ್ದರೆ ತಾನು ಊರು ಬಿಟ್ಟು ಹೋಗುವುದಾಗಿ ಶಪಥ ಮಾಡಿದ್ದರು.
ಆದರೆ, ಆ ಚುನಾವಣೆಯಲ್ಲಿ ಜಗನ್ಮೋಹನ್ ರೆಡ್ಡಿ ಗೆದ್ದಿದ್ದರು. ಹೀಗಾಗಿ ವಿಜಯಲಕ್ಷ್ಮೀ ಊರು ಬಿಟ್ಟು ಹೋಗಿದ್ದರು. ಕುಟುಂಬದ ಯಾವುದೇ ಕಾರ್ಯಕ್ರಮಕ್ಕೂ ಅವರು ಬಂದಿರಲಿಲ್ಲ. 2024ರ ಚುನಾವಣೆಯಲ್ಲಿ ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಗೆದ್ದಿದ್ದು, ಆ ಮಹಿಳೆ ಊರಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಮತ್ತೆ ಕೇಶವಪುರಕ್ಕೆ ಬಂದಿದ್ದರಿಂದ ಗ್ರಾಮಸ್ಥರು ಶಾಲು ಹೊದಿಸಿ, ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದ್ದಾರೆ.
