ಬೆಂಗಳೂರು: ಆರ್ ಸಿಬಿ ಹಾಗೂ ಡೆಲ್ಲಿ ಮ್ಯಾಚ್ ವೇಳೆ ಲೈವ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಲ್ ಟು ಬಾಲ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಬಂಧಿಸಿ 85 ಲಕ್ಷ ರೂ. ಸೀಜ್ ಮಾಡಲಾಗಿದೆ. ಸಿಸಿಬಿ ಡಿಸಿಪಿ ಅಕ್ಷಯ್ ಮಚೀಂದ್ರ ಅಂಡ್ ಟೀಮ್ ನಿಂದ ಕಾರ್ಯಾಚರಣೆ ನಡೆದಿದೆ.
ರಾಜಾಸ್ಥಾನ ಮೂಲದ ಧೃವ ಮಿತ್ತಲ್ ಕೆಲವು ದಿನಗಳಿಂದ ಆನ್ ಲೈನ್ ಬುಕ್ಕಿಂಗ್ ಆ್ಯಪ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ ಎನ್ನಲಾಗಿದೆ. ಧೃವ್ ನ ಬಳಿ ಎರಡು ಮೊಬೈಲ್, ಗೆಮಿಂಗ್ ಆ್ಯಪ್ ನಲ್ಲಿದ್ದ ಸುಮಾರು 63 ಲಕ್ಷ ಚಿಪ್ ಹಾಗೂ ಅಕೌಂಟ್ ನಲ್ಲಿದ್ದ 13 ಲಕ್ಷ ರೂ. ಹಣ ಸೇರಿದಂತೆ 75 ಲಕ್ಷ ರೂ. ಸೀಜ್ ಮಾಡಲಾಗಿದೆ.
ರೋಹಿತ್ ರಂಜನ್ ಎಂಬ ಮತ್ತೋರ್ವ ಬುಕ್ಕಿ ಗ್ರೌಂಡ್ ನಲ್ಲಿ ಬಾಲ್ ಟು ಬಾಲ್ ಬೆಟ್ಟಿಂಗ್ ಮಾಹಿತಿ ನೀಡುವ ವೇಳೆ ಅರೆಸ್ಟ್ ಆಗಿದ್ದಾನೆ. ಮಾಹಿತಿಯನ್ನು ಪಂಟರ್ ಗಳಿಗೆ ನೀಡಿ ಬಾಲ್ ಟು ಬಾಲ್ ಬುಕ್ಕಿಂಗ್ ನಡೆಸುತ್ತಿದ್ದ ಎನ್ನಲಾಗಿದೆ. ಟಿವಿಯಲ್ಲಿ ಬರುವ ಲೈವ್ ಗಿಂತ ಗ್ರೌಂಡ್ ನಲ್ಲಿ ಎರಡ್ಮೂರು ನಿಮಿಷ ಮ್ಯಾಚ್ ಮುಂದೆ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡು ಬಾಲ್ ಟು ಬಾಲ್ ಬೆಟ್ಟಿಂಗ್ ಮಾಡಿಸುವ ಪಂಟರ್ ಗಳಿಗೆ ಗ್ರೌಂಡ್ ನಲ್ಲಿ ಕುಳಿತು ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ.
ಜಕ್ಕೂರಿನ ವಿಜಯ್ ಕುಮಾರ್ ಬೆಟ್ಟಿಂಗ್ ಆ್ಯಪ್ ಮೂಲಕ ಬೆಟ್ಟಿಂಗ್ ಮಾಡಿಸುತ್ತಿದ್ದ ವಿಜಯ್ ನನ್ನು ಬಂಧಿಸಿ ಆ್ಯಪ್ ನಲ್ಲಿದ್ದ ಸುಮಾರು 10 ಲಕ್ಷ ರೂ. ಹಣವನ್ನು ಫ್ರೀಜ್ ಮಾಡಲಾಗಿದೆ. ಒಟ್ಟಾರೆ ಮೂವರಿಂದ 85 ಲಕ್ಷ ರೂ. ಹಣ ಸೀಜ್ ಮಾಡಲಾಗಿದ್ದು, ಪಂಟರ್ ಗಳು ಹಾಗೂ ಬುಕ್ಕಿಗಳು ಯಾರು ಎಂಬ ಕುರಿತು ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.