ಬೆಂಗಳೂರು : ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೆಲವು ದಿನಗಳ ಹಿಂದೆ ಮದ್ರಾಸ್ ಐ ಸೋಂಕು ಪಸರಿಸಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಹರಡಿ ಕಾಟ ಕೊಟ್ಟಿತ್ತು. ಈಗ ಮತ್ತೆ ಪಿಂಕ್ ಐ ಸರದಿ. ಡೆಂಗ್ಯೂ ಬೆನ್ನಲ್ಲೇ ಸಿಲಿಕಾನ್ ಸಿಟಿ ಜನರಿಗೆ ಪಿಂಕ್ ಐ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಮಕ್ಕಳೇ ಹೆಚ್ಚು ಗುರಿಯಾಗುತ್ತಿರುವ ಕಾರಣ ಪೋಷಕರಲ್ಲಿ ಆತಂಕ ಶುರುವಾಗಿದೆ. ಬದಲಾಗುತ್ತಿರುವ ಹವಾಮಾನವೇ ಪಿಂಕ್ ಐ ಕಾಯಿಲೆ ಹೆಚ್ಚಾಗಲು ಕಾರಣವಾಗಿದೆ.
ಏನಿದು ಪಿಂಕ್ ಐ ಸೋಂಕು?
ಕಣ್ರೆಪ್ಪೆ ಹಾಗೂ ಕಣ್ಣುಗುಡ್ಡೆಯನ್ನು ಸುತ್ತುವರೆದಿರುವ ಪಾರದರ್ಶಕ ಪೊರೆಯಾದ ಕಾಂಜಂಕ್ಟಿವಾ ಊದಿಕೊಂಡು ಸೋಂಕಿನಿಂದ ಕಣ್ಣುಗಳು ಕೆಂಪಾಗುತ್ತಿವೆ. ಸೋಂಕಿತ ರಕ್ತನಾಳಗಳು ಊದಿಕೊಳ್ಳುತ್ತವೆ. ಇದರಿಂದಾಗಿ ಕಣ್ಣಿನ ಒಳಭಾಗದ ಬಿಳಿಭಾಗವು ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದು ಕೂಡಾ ವೈರಲ್ ಸೋಂಕಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಬೇಗ ಹರಡುತ್ತದೆ. ಇದೀಗ ಸೋಂಕು ಹರಡುವಿಕೆ ಹೆಚ್ಚಾಗಿದ್ದು, ಶಾಲಾ ಮಕ್ಕಳ ಪೋಷಕರಲ್ಲಿ ಆತಂಕ ಮೂಡಿಸಿದೆ. ಮಕ್ಕಳಲ್ಲಿ ಹೆಚ್ಚಾಗಿ ಈ ಸೋಂಕು ಕಂಡುಬರುತ್ತಿರುವುದರಿಂದ, ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಪೋಷಕರು ಹಿಂದುಮುಂದು ನೋಡುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 15 ರಷ್ಟು ಹೆಚ್ಚಾಗಿದೆ ಎಂದು ಮಿಂಟೊ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ, ತಜ್ಞ ವೈದ್ಯ ಡಾ ಸುರೇಶ್ ಬಾಬು ತಿಳಿಸಿದ್ದಾರೆ.
ಪಿಂಕ್ ಐ ಲಕ್ಷಣಗಳೇನು?
- ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳಿಂದ ಕಣ್ಣಿನಲ್ಲಿ ಉರಿ/ಸೋಂಕು ಉಂಟಾಗುತ್ತದೆ
- ಧೂಳು, ಅಲರ್ಜಿಗಳು, ಮಾಲಿನ್ಯ ಇವುಗಳಿಂದಲೂ ಈ ಅಲರ್ಜಿ ಸಮಸ್ಯೆ ಬರಬಹುದು
- ಕಣ್ಣುಗಳು ಕೆಂಪಾಗುವುದು, ಸುಡುವಂತಾಗುವುದು
- ಬೆಳಕಿಗೆ ನೋವು, ಕಣ್ಣು ಮಿಡಿಯುವುದು
ಪಿಂಕ್ ಐ ಬಗ್ಗೆ ಏನೇನು ಮುನ್ನೆಚ್ಚರಿಕೆ ವಹಿಸಬೇಕು?
- ಗುಣಮುಖವಾಗುವವರೆಗೂ ಸಾಬೂನು ಬಳಸಿ ಕೈಗಳನ್ನು ಪದೇಪದೇ ತೊಳೆಯುವುದು
- ಕಣ್ಣಿನ ವೈದ್ಯರು ಸೂಚಿಸಿದ ಔಷಧಿ/ಐಡ್ರಾಪ್ಸ್ ನಿಯಮಿತವಾಗಿ ಬಳಸಿ ಕಣ್ಣುಗಳನ್ನು ಸ್ವಚ್ಛವಾಗಿ ಇಡಿ
- ಬಳಸಿದ ಟಿಶ್ಯೂ/ಕಾಟನ್‌ನ್ನು ತಕ್ಷಣ ಬೀಸಾಡುವುದು
- ಸೋಂಕಿತ ವ್ಯಕ್ತಿಯಿಂದ ಸ್ವಲ್ಪ ದೂರವಿರಿ
ಏನೇನು ಮಾಡಬಾರದು?
- ಗುಣಮುಕ್ತರಾಗುವವರೆಗೂ ಸಾರ್ವಜನಿಕ ಸ್ಥಳಗಳಿಗೆ ಹೋಗದಿರಿ
- ಕಣ್ಣಿಗೆ ವಿಶ್ರಾಂತಿ ಇಲ್ಲದೆ ಮೊಬೈಲ್ ಅಥವಾ ಟಿವಿ ವೀಕ್ಷಣೆ ಬೇಡಾ
- ಅನಗತ್ಯ ಕಣ್ಣುಗಳ ಉಜ್ಜುವುದು ಮುಟ್ಟುವುದು ಬೇಡಾ
- ಸೋಂಕಿತರು ಬಳಸಿದ
- ಮೇಕಪ್, ಕಾಜಲ್, ಲೆನ್ಸ್ ಟವಲ್ ಬಳಕೆ ತಪ್ಪಿಸಿ
- ಮನೆ ಮದ್ದು ಬೇಡಾ
- ವೈದ್ಯರ ಸಲಹೆ ಇಲ್ಲದೆ ಔಷಧಿ ಬಳಸಬೇಡಿ
ಇದನ್ನೂ ಓದಿ : ಪಿಸಿಓಡಿ-ಪಿಸಿಓಎಸ್ ಸಮಸ್ಯೆಯೇ..? ಯಾವ ಹಣ್ಣು ತಿಂದರೇ ಒಳ್ಳೆಯದು? ಇಲ್ಲಿದೆ ಮಾಹಿತಿ



















