ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಯಿ ಸಾಕೋದಕ್ಕೆ ಕೆಲ ಮಾನದಂಡ ಅನುಸರಿಸಲು ಜಿಬಿಎ ಹೊಸ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಸುಪ್ರೀಂ ಕೋರ್ಟ್ ಕೂಡ ಕೆಲ ಮಾನದಂಡಗಳನ್ನು ಅನುಸರಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿತು.
ಈಗ ಸಾಕು ನಾಯಿಗಳಿಂದ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಹೆಚ್ಚಿನ ತೊಂದರೆ ಆಕ್ತಿದೆ ಅಂತ ಕೆಲವರು ಜಿಬಿಎಗೆ ದೂರು ನೀಡಿದರು. ಇನ್ನೂ ದೂರಿನ್ವಯ ಜಿಬಿಎ ಮುಖ್ಯ ಆಯುಕ್ತರು 5 ನಗರಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿ ಸಾಕು ನಾಯಿಗಳ ಸಾಕೋದಕ್ಕೆ ಕೆಲ ಮಾನದಂಡಗಳನ್ನು ಅನುಸರಿಸಿ ಸಾಧು ಸ್ವಭಾವದ ಹಾಗೂ ಅಕ್ರಮ ಸ್ವಭಾವದ ನಾಯಿಗಳ ಸಾಕೋದಕ್ಕೆ ಹಾಗೆ ವಸತಿ ಸಮುಚ್ಚಯದಲ್ಲಿ ಹಾಗೂ ಮನೆಗಳಲ್ಲಿ ಸಾಕೋದಕ್ಕೆ ಹೊಸ ನಿಯಮ ಜಾರಿಗೆ ತರುವಂತೆ ಸೂಚನೆ ನೀಡಿದ್ದಾರೆ.
ಇನ್ನೂ ಕಳೆದ ವರ್ಷ ಜಿಬಿಎಯ ಪಶುಪಾಲನೆ ಇಲಾಖೆ ಸಾಕು ನಾಯಿಗಳ ಸರ್ವೆ ನಡೆಸಿದಾಗ ಸುಮಾರು ಒಂದು ಲಕ್ಷ 15 ಸಾವಿರ ಸಾಕು ನಾಯಿಗಳ ಮಾಹಿತಿ ಸಂಗ್ರಹಿಸಲಾಗಿತ್ತು. ಇನ್ನೂ ಸಾಕು ನಾಯಿಗಳ ಸಾಕೋದಕ್ಕೆ ಅಂತ ಪ್ರಾಣಿ ಹಿಂಸೆ 1960 ರ ಕಾಯ್ದೆ ಪ್ರಕಾರ ಕೆಲ ಷರತ್ತುಗಳನ್ನು ವಿಧಿಸಿ ಸಾರ್ವಜನಿಕರು ಮನೆಯಲ್ಲಿ ನಾಯಿ ಸಾಕುವುದಕ್ಕೆ ನಿಯಮ ಜಾರಿಗೆ ತರಲು ಜಿಬಿಎ ಮುಂದಾಗಿದೆ.
ಹೊಸ ಕಾಯ್ದೆಯಲ್ಲಿ ಸಾಕು ನಾಯಿಗಳ ಸಾಕುವುದಕ್ಕೆ ಜಿಬಿಎ ಪಶುಪಾಲನೆ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಹಾಗೂ ವಾರ್ಷಿಕವಾಗಿ ಜಿಬಿಎಗೆ ಇಂತ್ತಿಷ್ಟು ಅಂತ ಹಣ ಪಾವತಿ ಮಾಡಿ ಪ್ರತಿ ವರ್ಷ ಪರವಾನಗಿ ನವೀಕರಣ ಮಾಡಿಸಿಕೊಳ್ಳಬೇಕು. ಹಾಗೆ ಕ್ರೂರ ಸ್ವಭಾವದ ನಾಯಿಗಳ ಸಾಕುವಿಕೆಗೆ ನಿಷೇಧ ಮಾಡಬೇಕು ಎಂದು ಕಾಯ್ದೆಯಲ್ಲಿ ನಮೂದಿಸಲು ಮುಂದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಾಗದರೆ ಹೊಸ ಸಾಕು ನಾಯಿಗಳ ಕಾಯ್ದೆಯಲ್ಲಿ ಯಾವೆಲ್ಲಾ ನಿಯಮಗಳು ಇರುತ್ತೆ
- ಸಾಕು ನಾಯಿಗಳನ್ನು ಸಾಕೋದಕ್ಕೆ ಜಿಬಿಎಯಿಂದ ಪರವಾನಗಿ ಪಡೆಯಬೇಕು.
- ಪ್ರತಿ ವರ್ಷ ಪರವಾನಗಿ ನವೀಕರಣಕ್ಕೆ ಜಿಬಿಎಗೆ ಇಂತ್ತಿಷ್ಟು ಹಣ ಪಾವತಿ ಮಾಡಬೇಕು.
- ನಾಯಿಗಳ ವರ್ಗದ (ತಳಿ) ಆಧಾರದ ಮೇಲೆ ಪರವಾನಗೆ ಶುಲ್ಕ ನಿಗಧಿ.
- ಜಿಬಿಎ ನಿಯೋಜಿತ ಪಶು ವೈದ್ಯಾಧಿಕಾರಿಯಿಂದ ದೃಢೀಕರಣ ಪಡೆಯಬೇಕು.
- ಪ್ರತಿ ಸಾಕು ನಾಯಿ ಮಾಲೀಕರು ತಮ್ಮ ಸ್ವಂತ ಖರ್ಚಿನಲ್ಲಿ ಮೈಕ್ರೋ ಚಿಪ್ ಅಳವಡಿಸಬೇಕು.
- ಪ್ರತಿ ಸಾಕು ನಾಯಿ ಮಾಲೀಕರು ನಾಯಿಗೆ ರೆಬೀಸ್ ಲಸಿಕೆ ಹಾಕಿಸಬೇಕು.
- ಲಸಿಕೆ ಹಾಕಿದ ಬಗ್ಗೆ ನೊಂದಾಯಿತ ಪಶು ವೈದ್ಯರಿಂದ ದೃಢೀಕರಣ ಪಡೆಯಬೇಕು.
- ಪ್ರತಿ ಸಾಕು ನಾಯಿ ಮಾಲೀಕರು 12 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ನಾಯಿಗೆ ಕಡ್ಡಾಯವಾಗಿ ಸಂತಾನಹರಣ ಚಿಕಿತ್ಸೆ ಮಾಡಿಸಬೇಕು.
- ಇನ್ನೂ ಸಾಕು ನಾಯಿಗಳ ಅವರಣವನ್ನು ಸ್ವಚ್ಚತೆ ಕಾಪಾಡಬೇಕು.
- ನೆರೆಹೊರೆಯವರಿಗೆ ತೊಂದರೆ ಆಗದಂತೆ ನಾಯಿ ಸಾಕಬೇಕು.
- ಮನೆಗಳಲ್ಲಿ ಮೂರು ನಾಯಿಗಳಿಗಿಂತ ಹೆಚ್ಚಿನ ನಾಯಿ ಸಾಕೋದಕ್ಕೆ ಅವಕಾಶ ಇಲ್ಲ.
- ಮೂರು ನಾಯಿಗಳಿಗಿಂತ ಹೆಚ್ಚಾಗಿ ಸಾಕಿದರೆ ಅಂತಹ ನಾಯಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಪ್ರಾಣಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.
- ನಗರಪಾಲಿಕೆ ಬೈಲಾಗಳ ಪ್ರಕಾರ ನಾಯಿಗಳನ್ನು ಸಾಕಬೇಕು.
- ಒಂದು ವೇಳೆ ಬೈಲಾ ನಿಯಮ ಉಲ್ಲಂಘನೆ ಮಾಡಿದ್ರೆ ಕಾನೂನು ರೀತಿಯ ಕ್ರಮ.
- ಇನ್ನೂ ಸಾಕು ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೊದಗ ನಾಯಿಯ ಕತ್ತಿಗೆ ಹಗ್ಗ ಅಥವಾ ಚೈನ್ ಅಳವಡಿಕೆ ಮಾಡಿರಬೇಕು.
- ವಾಕಿಂಗ್ ವೇಳೆಯಲ್ಲಿ ನಾಯಿ ರಸ್ತೆಯಲ್ಲಿ ಗಲೀಜು ಮಾಡಿದ್ರೆ ಅದನ್ನು ನೀವೇ ತೆಗೆಯಬೇಕು.
- ಇನ್ನೂ ಸಾಕು ನಾಯಿ ತಪ್ಪಿಸಿಕೊಂಡು ನಗರಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದರೆ ಅದಕ್ಕೆ ಇಂತ್ತಿಷ್ಟು ಅಂತ ದಂಡ ಪಾವತಿ ಮಾಡಿ ನಾಯಿ ಬಿಡಿಸಿಕೊಳ್ಳಬೇಕು.
- 72 ಗಂಟೆಯೊಳಗೆ ಬಿಡಿಸಿಕೊಂಡರೆ ಒಂದು ಸಾವಿರ ದಂಡ ಪಾವತಿ ಮಾಡಬೇಕು.
- 72 ಗಂಟೆಯ ನಂತರ ಬಿಡಿಸಿಕೊಳ್ಳದಿದರೆ ಪ್ರತಿ ದಿನ 200 ರೂ ದಂಡ ಪಾವತಿಸಬೇಕು.
- ಒಂದು ವೇಳೆ ಬಿಡಿಸಿಕೊಳ್ಳದೆ ಹೋದರೆ ನಾಯಿಯನ್ನು ಪ್ರಾಣಿ ದಾಯಸಂಘಕ್ಕೆ ನೀಡಲಾಗಿದೆ.
- ಇನ್ನೂ ಅಪಾರ್ಟ್‌ಮೆಂಟ್ ಗಳಲ್ಲಿ ಉಗ್ರ ಸ್ವರೂಪದ ನಾಯಿಗಳ ಸಾಕುವಿಕೆಗೆ ನಿಷೇಧ.
- ಅದರಲ್ಲೂ ಜರ್ಮನ್ ಶಪಾರ್ಡ್..ರೊಟ್ರೇಲರ್.ಡಾಬಬರ್ಮಾನ್ .ಹೌಂಡ ನಾಯಿಗಳ ಸಾಕೋದಕ್ಕೆ ನಿಷೇಧ ಹೇರಲಾಗಿದೆ.
- ಒಂದು ವೇಳೆ ನಿಷೇಧತ ನಾಯಿಗಳನ್ನು ಸಾಕಿದರೆ ಅವುಗಳನ್ನು ಸಾರ್ವಜನಿಕರ ಓಡಾಡುವ ಪ್ರದೇಶದಲ್ಲಿ ಪ್ರವೇಶ ನಿಷೇಧ..
ಇದನ್ನೂ ಓದಿ : 1 ಲಕ್ಷ ಲಂಚ ಪಡೆಯುವಾಗ ‘ಲೋಕಾ’ ಬಲೆಗೆ ಬಿದ್ದ PWD ಅಧಿಕಾರಿಗಳು!



















