ಬೆಂಗಳೂರು : ನಗರದಲ್ಲಿ ಮುಂದಿನ ವಾರ ಮೂರು ದಿನಗಳ ಕಾಲ ಮನೆಗೆ ಕಾವೇರಿ ನೀರು ಬರುವುದಿಲ್ಲ ಎಂದು ಜಲಮಂಡಳಿಯ ಅಧ್ಯಕ್ಷ ರಾಮ ಪ್ರಸಾದ್ ಮನೋಹರ್ ಮಾಹಿತಿ ನೀಡಿದ್ದಾರೆ.
ಕಾವೇರಿ ನೀರು ಸರಬರಾಜು ಯೋಜನೆಯ ಜಲರೇಚಕ ಯಂತ್ರಗಾರಗಳು ಮತ್ತು ಮುಖ್ಯ ಕೊಳವೆ ಮಾರ್ಗಗಳ ಸುಲಲಿತ ಚಾಲನೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಸುಸ್ಥಿತಿಯಲ್ಲಿಡುವ ಉದ್ದೇಶದಿಂದ ಜಲಮಂಡಳಿಯ ವಿವಿಧೆಡೆ ನಿಯಮಿತ ತುರ್ತು ನಿರ್ವಹಣೆಯ ಕಾಮಗಾರಿ ಹಿನ್ನೆಲೆಯಲ್ಲಿ ಸೆ.15ರ ಮಧ್ಯಾರಾತ್ರಿ 1 ಗಂಟೆಯಿಂದ ಸೆ.17ರ ಮಧ್ಯಾಹ್ನ 1ರವರೆಗೆ ನೀರಿನ ಸರಬರಾಜು ಸ್ಥಗಿತವಾಗಲಿದೆ ಹಾಗಾಗಿ, ಮುಂಜಾಗ್ರತೆಯಾಗಿ ಅಗತ್ಯ ನೀರು ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚನೆ ನೀಡಿದ್ದಾರೆ.