ಬೆಂಗಳೂರು : ಸಾರಕ್ಕಿ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ನ.19ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು BESCOM ಮಾಹಿತಿ ನೀಡಿದೆ.
ಶಾಕಂಬರಿ ನಗರ, ಪೈಪ್‌ಲೈನ್ ರೋಡ್, ರಾಘವೇಂದ್ರ ಸ್ವಾಮಿ ಮಠ, ಜೆ.ಪಿ. ನಗರ ಮೊದಲನೇ ಹಂತ, 14ನೇ ಅಡ್ಡ ರಸ್ತೆ, ಸಲಾರ್‌ಪುರಿಯಾ ಅಪಾರ್ಟ್‌ಮೆಂಟ್, ನಾಗಾರ್ಜುನ ಅಪಾರ್ಟ್‌ಮೆಂಟ್, ಪುಟ್ಟೇನಹಳ್ಳಿ, ಜಯನಗರ 8, 5, 7 ನೇ ಬ್ಲಾಕ್, ಐಟಿಐ ಲೇಔಟ್, ಎಸ್.ಬಿ.ಐ. ಕಾಲೋನಿ, ಅರ್.ವಿ. ಡೆಂಟಲ್ ಕಾಲೇಜ್ ಸುತ್ತಮುತ್ತಲ ಪ್ರದೇಶಗಳು, 24ನೇ ಮೇನ್, ಎಲ್ಐಸಿ ಕಚೇರಿ ಹಿಂಭಾಗ, ಎಲ್ಐಸಿ ಕಾಲೋನಿ, ಕೆ.ಆರ್. ಲೇಔಟ್, ವೆಂಕಟಾದ್ರಿ ಲೇಔಟ್, ಜೆ.ಪಿ. ನಗರ 5ನೇ ಹಂತ, ಸಾಯಿ ನರ್ಸರಿ ರಸ್ತೆ, ಜೆ.ಪಿ. ನಗರ 6ನೇ ಹಂತ, 15ನೇ ಕ್ರಾಸ್, 16 & 12 ನೇ ಕ್ರಾಸ್, ಆದರ್ಶ ರೆಸಿಡೆನ್ಸಿ ಅಪಾರ್ಟ್‌ಮೆಂಟ್, ಬನ್ನೇರಘಟ್ಟ ರೋಡ್, ಡಾಲರ್ಸ್ ಲೇಔಟ್, ಕಲ್ಯಾಣಿ ಮ್ಯಾಗ್ನಮ್ ಅಪಾರ್ಟ್‌ಮೆಂಟ್, ಕಲ್ಯಾಣಿ ಕೃಷ್ಣ ಮ್ಯಾಗ್ನಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಈ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯ
ಕೆಪಿಟಿಸಿಎಲ್ 220/66/11 ಕೆ.ವಿ. ಎನ್.ಆರ್.ಎಸ್, 66/11 ಕೆ.ವಿ. ಪಲಾಡಿಯಂ ಮತ್ತು 66/11 ಕೆ.ವಿ. ಟೆಲಿಕಾಂ ಲೇಔಟ್‌ನ ವಿದ್ಯುತ್ ವಿತರಣಾ ಕೇಂದ್ರಗಳ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ನ.19ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
220/66/11 ಕೆ.ವಿ. ಎನ್.ಆರ್.ಎಸ್: ರಾಜಾಜಿನಗರ 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, 4ನೇ ಬ್ಲಾಕ್, 5ನೇ ಬ್ಲಾಕ್ & 6ನೇ ಬ್ಲಾಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಗುಬ್ಬಣ್ಣ ಇಂಡಸ್ಟ್ರಿಯಲ್ ಏರಿಯಾ, ಡಾ. ಮೋದಿ ಹಾಸ್ಪಿಟಲ್ ರೋಡ್, ಮಂಜುನಾಥ ನಗರ, ಶಿವನಗರ, ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರೋಡ್ 1ನೇ ಕ್ರಾಸ್, 2ನೇ ಕ್ರಾಸ್, 3ನೇ ಕ್ರಾಸ್, 4ನೇ ಕ್ರಾಸ್, 5ನೇ ಕ್ರಾಸ್, ಮಹಾಗಣಪತಿ ನಗರ, ಕೆ.ಎಚ್.ಬಿ. ಕಾಲೋನಿ 2ನೇ ಹಂತ, ದೇವಯ್ಯ ಪಾರ್ಕ್, ನಾಗಪ್ಪ ಬ್ಲಾಕ್, ಲಿಂಕ್ ರೋಡ್, ಶನಿಮಹಾತ್ಮ ಟೆಂಪಲ್, ಪ್ರಕಾಶನಗರ, ಗಾಯತ್ರಿನಗರ, ಸುಬ್ರಮಣ್ಯನಗರ, ಎಲ್.ಎನ್.ಪುರ, ರಾಜ್ ಕುಮಾರ್ ರೋಡ್, ದಯಾನಂದನಗರ, ಸಾಯಿಮಂದಿರ, ಹರಿಶ್ಚಂದ್ರ ಘಾಟ್, ಮಾರುತಿ ಎಕ್ಸ್ಟನ್, ರಾಜಾಜಿನಗರ, ಬ್ರಿಗೇಡ್ ಗೇಟ್ ವೇ ಅಪಾರ್ಟ್‌ಮೆಂಟ್ಸ್, ಪ್ಯಾಲೇಸ್ ಗುಟ್ಟಹಳ್ಳಿ, ಮುನೇಶ್ವರ ಬ್ಲಾಕ್, ಮಲ್ಲೇಶ್ವರಂ ಸ್ವಿಮ್ಮಿಂಗ್ ಪೂಲ್, ಪೈಪ್‌ಲೈನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
66/11 ಕೆ.ವಿ ಪಲಾಡಿಯಂ: ಆರ್.ಬ್ಲಾಕ್, ನಿರ್ಮಾಣ್ ಭವನ್, ಕೆ.ಆರ್.ಡಿ.ಸಿ.ಎಲ್, ಜೆಟ್ ಲಾಗ್, ನಾರಾಯಣ ನೇತ್ರಾಲಯ, ಇಸ್ಕಾನ್ ಟೆಂಪಲ್, ಪಲಾಡಿಯಂ ವಸತಿ ಸಮುಚ್ಚಯ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
66/11 ಕೆ.ವಿ ಟೆಲಿಕಾಂ ಲೇಔಟ್: ವೆಸ್ಟ್ ಆಫ್ ಕಾರ್ಡ್ ರೋಡ್, ಎಂ.ಸಿ. ಲೇಔಟ್, ವಿಜಯನಗರ ವಾಟರ್ ಟ್ಯಾಂಕ್, ಹೊಸಹಳ್ಳಿ ಮೈನ್ ರೋಡ್, ಹಂಪಿನಗರ, ಮಾಗಡಿ ಮುಖ್ಯ ರಸ್ತೆ, ಬಿನ್ನಿಪೇಟೆ, ಜಗಜೀವನ ರಾಂನಗರ, ಗೋಪಾಲಪುರ, ಹೊಸಹಳ್ಳಿ, ಹಳೇಗುಡ್ಡದಹಳ್ಳಿ, ಭುವನೇಶ್ವರಿ ನಗರ, ಗೋರಿಪಾಳ್ಯ, ವಿ.ಎಸ್.ಗಾರ್ಡನ್, ಗೂಡ್ಸ್ ಶೆಡ್ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : BBK12 | ಗಿಲ್ಲಿ ಆಡಿದ ಮಾತಿಗೆ ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ!



















