ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಿನಿ ಟ್ರಕ್‌ವೊಂದು ಪೆಟ್ರೋಲ್ ಬಂಕ್‌ಗೆ ನುಗ್ಗಿದ ಘಟನೆ ಚಾಮರಾಜಪೇಟೆ ಮುಖ್ಯ ರಸ್ತೆಯ ನಯಾರಾ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.

ಸನ್‌ಪ್ಯೂರ್ ಎಣ್ಣೆ ಸಾಗಾಟ ಮಾಡುತ್ತಿದ್ದ ಟ್ರಕ್ ನುಗ್ಗಿದ ಪರಿಣಾಮ ಪೆಟ್ರೋಲ್ ಬಂಕ್‌ನ ಶೌಚಾಲಯದ ಕಟ್ಟಡ ಜಖಂಗೊಂಡಿದೆ. ಅಲ್ಲದೇ ಡಿಕ್ಕಿಯ ರಭಸಕ್ಕೆ ಒಂದು ಬೈಕ್ ಕೂಡ ಲಾರಿಯಡಿಗೆ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.