ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನಪ್ಪಿದ್ದು. ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವ ಘಟನೆ ಸುಬ್ರಹ್ಮಣ್ಯನಗರ ಮಿಲ್ಕ್ ಕಾಲೋನಿಲ್ಲಿರೋ ಮನೆಯಲ್ಲಿ ನಡೆದಿದೆ.
ದಾವಣಗೆರೆ ಮೂಲದ ಸುಪ್ರಿಯ (25) ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಕಳೆದ 2 ವರ್ಷ 8 ತಿಂಗಳಿನಿಂದ ಮನೆಯ 3ನೇ ಫ್ಲೋರ್‌ನಲ್ಲಿ ವಾಸವಾಗಿದ್ದರು. ಎರಡು ದಿನಗಳಿಂದ ಆಕೆ ವಾಸವಾಗಿದ್ದ ರೂಂ ಲಾಕ್ ಆಗಿತ್ತು. ಅನುಮಾನಗೊಂಡು ಮನೆ ಮಾಲೀಕ ಬಾಗಿಲು ಓಪನ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಫ್ಯಾನ್ ಗೆ ನೇಣು ಬಿಗಿದು ತುಂಡಾಗಿ ಬಿದ್ದ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿದೆ.
ಸದ್ಯ ಯುಡಿಆರ್ ಕೇಸ್ ದಾಖಲಿಸಿಕೊಂಡು ಸುಬ್ರಮಣ್ಯನಗರ ಪೋಲಿಸರು ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ : ಮಹಿಳಾ ವಿಶ್ವಕಪ್ ಬಹುಮಾನದ ಮೊತ್ತ: ವಿಜೇತರಿಗೆಷ್ಟು? ರನ್ನರ್ಸ್-ಅಪ್‌ಗೆಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ



















