ಬೆಂಗಳೂರು : ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್ ವಿಠಲ್ ನಗರದಲ್ಲಿ ನಡೆದಿದೆ.
ನವೀನ್ ಕುಮಾರ್‌ನ ಹೋಂಡಾ ಡಿಯೋ ಸ್ಕೂಟಿ ಕಳವು. ನವೀನ್‌ಗೆ ಅವರ ತಾಯಿ 15 ವರ್ಷಗಳ ಹಿಂದೆ ಬೈಕ್ ಕೊಡಿಸಿದ್ದರು. ಈತನ ತಾಯಿ ಕೆಲ ತಿಂಗಳ ಹಿಂದೆ ಸಾವನ್ನಪ್ಪಿದ್ದು, ತಾಯಿ ನೆನಪಿಗಾಗಿ ಗಾಡಿಯನ್ನ ಮಾಡಿಫೈ ಮಾಡಿಸಿಕೊಂಡಿದ್ದನು.
ಎಂದಿನಂತೆ ನವೀನ್ ಮನೆಯ ಮುಂದೆ ಗಾಡಿ ನಿಲ್ಲಿಸಿದ್ದನು. ಆದರೆ ಕಳ್ಳರು ಬಂದು ಗಾಡಿ ಕದ್ಯೊದಿದ್ದಾರೆ. ಇದೀಗ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ನವೀನ್ ಬೈಕ್ ತನ್ನ ತಾಯಿಯ ನೆನಪು ಹುಡುಕಿಕೊಡಿ ಎಂದು ಅಳಲು ತೋಡಿಕೊಂಡಿದ್ದು, ಪೋಲಿಸರು ಪರೀಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬಾಂಗ್ಲಾದಲ್ಲಿ ರಾಕ್ಷಸರ ಅಟ್ಟಹಾಸ | ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಹಿಂದೂಗಳ ಹತ್ಯೆ


















