ಬೆಂಗಳೂರು : ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮುಸಲ್ಮಾನರಿಂದ ಸಾಮೂಹಿಕ ನಮಾಜ್ ನಡೆದಿದ್ದು, ಸಾರ್ವಜನಿಕರು ಸೋಶಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಸ್ಥಳದಲ್ಲಿ ಸಾಮೂಹಿಕ ನಮಾಜ್ ಮಾಡಿದರೂ ಕೂಡ ಏರ್ಪೋಟ್ ಸಿಬ್ಬಂದಿ ಭದ್ರತಾ ಪಡೆ ಸುಮ್ಮನೆ ನಿಂತಿದೆ. ಏರ್ಪೋಟ್ ಒಳ ಭಾಗದಲ್ಲಿ ಪ್ರಯಾಣಿಕರಿಗೆ ಪ್ರಾರ್ಥನಾ ಕೊಠಡಿಯಿದ್ದರೂ ಹೊರಗಡೆ ನಮಾಜ್ ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿ ನೆಟ್ಟಿಗರು ಕಿಡಿಕಾರಿದ್ದಾರೆ.
ಮೆಕ್ಕಾಗೆ ತೆರಳುತ್ತಿದ್ದವರನ್ನ ಬಿಳ್ಕೊಡಲು ಬಂದಿದ್ದವರು ನಮಾಜ್ ಮಾಡಿರುವುದು ಎಂದು ತಿಳಿದುಬಂದಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಮಾಜ್ ವಿಡಿಯೋ ಹರಿದಾಡುತಿರುತ್ತದೆ.
ಇದನ್ನೂ ಓದಿ : ಜೈಲಿನಲ್ಲಿ ರಾಜಾತಿಥ್ಯದ ವಿಡಿಯೋ ವೈರಲ್ | ಸಿಸಿಬಿಯಿಂದ ನಟ ಧನ್ವೀರ್ ವಿಚಾರಣೆ



















