ಬೆಂಗಳೂರು: ಮಹಿಳೆಯೊಬ್ಬಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಅರೋಪಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ರಾಜಗೋಪಾಲನಗರದ ಇಂದಿರಾಪ್ರಿಯದರ್ಶಿನಿ ನಗರದಲ್ಲಿ ನಡೆದಿದೆ.
ಲಲಿತಾ (49) ಕೊಲೆಯಾದ ಮಹಿಳೆ. ಲಕ್ಷ್ಮಿನಾರಾಯಣ( 51) ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪತ್ನಿಯನ್ನು ತೊರೆದ ಲಲಿತಾ ಎಂಬಾಕೆಯ ಜೊತೆಯಲ್ಲಿದ್ದ ಲಕ್ಷ್ಮಿನಾರಾಯಣ. ಈ ನಡುವೆ ಲಲಿತಾಳ ನಡತೆ ಬಗ್ಗೆ ಪ್ರಶ್ನಿಸಿ ಜಗಳ ಮಾಡುತ್ತಿದ್ದ. ಇದೇ ವಿಷಯಕ್ಕೆ ಸೋಮವಾರ ರಾತ್ರಿ ವೇಲ್‌ನಲ್ಲಿ ಲಲಿತಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.
ಬೆಳಗ್ಗೆ ಮನೆಯ ಬಾಗಿಲು ಓಪನ್ ಆಗದಿದ್ದಕ್ಕೆ ಸ್ಥಳೀಯರು ಅನುಮಾನದಿಂದ ಮನೆ ಒಳಗೆ ಹೋಗಿದ್ದಗಾ ಕೊಲೆ ಹಾಗೂ ಆತ್ಮಹತ್ಯೆಯ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ರಾಜಗೋಪಾನಗರ ಪೊಲೀಸರು ಸ್ಥಳ ಪರಿಶೀಲನೆ ಮಾಡಿ, ಮೃತದೇಹಗಳನ್ನು ವಿಕ್ಟೋರಿಯಾ ಅಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹೊಸನಗರ | ಜ್ವರ ಎಂದು ಆಸ್ಪತ್ರೆಗೆ ಹೋದ ಮಹಿಳೆಗೆ ‘ಮಂಗನ ಕಾಯಿಲೆ’ ಪಾಸಿಟಿವ್ ; ಜನರಲ್ಲಿ ಆತಂಕ!



















