ಬೆಂಗಳೂರು: ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ಹೊರ ಬಿದ್ದಿದ್ದು, ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜಾಗಿದೆ.
ಸಿಲಿಕಾನ್ ಸಿಟಿಯು ಐಟಿಬಿಟಿ ಹೆಸರಿನೊಂದಿಗೆ ಗಲೀಜು ಸಿಟಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಸ್ವಚ್ಛ ಸರ್ವೇಕ್ಷಣ್ 2025 ಸಮೀಕ್ಷೆಯಲ್ಲಿ ಬೆಂಗಳೂರಿಗೆ ಕೊಳಕು ಸಿಟಿ ಎಂಬ ಬಿರುದು ಸಿಕ್ಕಿದೆ. ಭಾರತದಲ್ಲಿ ಕೊಳಕು ನಗರಗಳ ಪಟ್ಟಿಯಲ್ಲಿ ಬೆಂಗಳೂರು ಐದನೇ ಸ್ಥಾನ ಸಿಕ್ಕಿದೆ.
ಡರ್ಟಿಯಸ್ಟ್ ಟಾಫ್ 5 ರ ಪಟ್ಟಿಯಲ್ಲಿ ಬೆಂಗಳೂರು 5ನೇ ಸ್ಥಾನ ಪಡೆದಿದೆ. 10 ಲಕ್ಷ ಜನಸಂಖ್ಯೆ ಇರುವ ಮಹಾನಗರಗಳಲ್ಲಿ ಸಮೀಕ್ಷೆ ನಡೆಸಿ ಲಿಸ್ಟ್ ಬಿಡುಗಡೆ ಮಾಡಲಾಗಿತ್ತು.
ಮಧುರೈ, ಲುಧಿಯಾನ, ಚೆನ್ನೈ, ರಾಂಚಿ ನಂತರ ಬೆಂಗಳೂರು ನಗರ ಸ್ಥಾನ ಪಡೆದಿದೆ. ಘನತ್ಯಾಜ್ಯ ನಿರ್ವಹಣಾ ಪ್ರಾಧಿಕಾರ ರಚಿಸಿದರೂ ಬೆಂಗಳೂರು ನಗರ ಗಲೀಜು ಸಿಟಿ ಎಂಬ ಹಣೆಪಟ್ಟಿ ಎದುರಿಸುತ್ತಿರುವುದು ನೋವಿನ ಸಂಗತಿಯಾಗಿದೆ.