ರಾಜ್ಯದಲ್ಲಿ ಬಾಣಂತಿಯರು ಹಾಗೂ ಶಿಶು ಮರಣ ಪ್ರಮಾಣ ಹೆಚ್ಚಾಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಇನ್ನೊಂದೆಡೆ ವಿಪಕ್ಷಗಳು ಕೂಡ ಮುಗಿ ಬೀಳುತ್ತಿವೆ. ಹೀಗಾಗಿ ಸರ್ಕಾರ ತನಿಖೆಗೂ ಆದೇಶಿಸಿದೆ. ಈ ಸಾವಿನ ಆತಂಕ ಈಗ ಬಿಬಿಎಂಪಿ ವ್ಯಾಪ್ತಿಗೂ ಆವರಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಇಬ್ಬರು ಬಾಣಂತಿಯರು ಸಾವನ್ನಪ್ಪಿದ್ದರು. ಹೀಗಾಗಿ ಸರ್ಕಾರ ಈಗಾಗಲೇ ತನಿಖೆಗೆ ಆದೇಶಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಶಿಶು ಮರಣ ಪ್ರಮಾಣ ಹೆಚ್ಚಾಗಿದೆ ಎಂಬ ಅಂಕಿ ಅಂಶ ಬಹಿರಂಗವಾಗಿದೆ. ಈ ಪೈಕಿ 5 ವರ್ಷದೊಳಗಿನ ಮಕ್ಕಳೇ ಹೆಚ್ಚಾಗಿ ಸಾವನ್ನಪ್ಪಿದ್ದರೆ. 8 ತಿಂಗಳಲ್ಲಿ ಬರೋಬ್ಬರಿ 535 ಶಿಶುಗಳು ಮರಣ ಹೊಂದಿವೆ.
ಕಿಡ್ನಿ ವೈಫಲ್ಯ, ಕ್ಯಾನ್ಸರ್, ಹೃದ್ರೋಗ ಸಮಸ್ಯೆ, ಕಡಿಮೆ ತೂಕ, ಅವಧಿಗೂ ಮುನ್ನ ಜನನ, ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ಶಿಶು ಸಾವನ್ನಪ್ಪುತ್ತಿವೆ. ಈ ಪೈಕಿ ಹೃದ್ರೋಗ, ಕ್ಯಾನ್ಸರ್ ಕಾಯಿಲೆಯಿಂದಲೇ ಹೆಚ್ಚು ಮಕ್ಕಳು ಸಾವನ್ನಪ್ಪಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಏಪ್ರಿಲ್ ನಿಂದ ಸೆಪ್ಟೆಂಬರ್ ಅವಧಿಯಲ್ಲಿ 59 ಸಾವಿರ ಹೆರಿಗೆ ಆಗಿದೆ. ಈ ಪೈಕಿ 23 ಬಾಣಂತಿಯರು ಸಾವನ್ನಪ್ಪಿದರೆ, 535 ಶಿಶು ಹಾಗೂ 5 ವರ್ಷದೊಳಗಿನ ಮಕ್ಕಳು ಸಾವನ್ನಪ್ಪಿದ್ದಾರೆ. ಈ ಸಾವುಗಳ ಪೈಕಿ ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಯಲ್ಲಿ 225 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 258 ಶಿಶುಗಳು ಸಾವನ್ನಪ್ಪಿವೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲೇ 277 ಶಿಶುಗಳು ಸಾವನ್ನಪ್ಪಿವೆ.