ಬೆಂಗಳೂರು: ಇಂದಿನಿಂದ 5 ಮಹಾನಗರ ಪಾಲಿಕೆವುಳ್ಳ ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ.
5 ಮಹಾನಗರ ಪಾಲಿಕೆಗಳ ಪೈಕಿ ಒಂದೊಂದು ಪಾಲಿಕೆಗೆ 100ರಿಂದ 150 ವಾರ್ಡ್‌ಗಳನ್ನು ಸೇರಿಸಲಾಗುತ್ತದೆ. ಅಂದಾಜು 500 ಸದಸ್ಯರು ಆರಿಸಿ ಬರಲಿದ್ದಾರೆ. ನವೆಂಬರ್ 1ರೊಳಗೆ ವಾರ್ಡ್ ವಿಂಗಡಣೆ ಅಂತಿಮವಾಗಲಿದೆ ಎನ್ನಲಾಗಿದೆ.
ವಾರ್ಡ್ ವಿಂಗಡಣೆಯಾದ ನಂತರವೇ ಚುನಾವಣೆ ನಡೆಯಲಿದೆ. ಸದ್ಯದ ಮಾಹಿತಿಯನ್ನು ಗಮನಿಸಿದರೆ ಮುಂದಿನ ವರ್ಷಾರಂಭದಿಂದಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ.