ಬೆಂಗಳೂರು: ಮನೆಯ ಬಳಿ ರಸ್ತೆ ಮೇಲೆ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿದಿರುವ ಘೋರ ಘಟನೆ ನೆಲಮಂಗಲದ ಟಿ ಬಿ ಸ್ಟಾಪ್ ಬಳಿಯ ಸುಭಾಷ್ ನಗರದಲ್ಲಿ ನಡೆದಿದೆ.
ಮೂರು ವರ್ಷದ ದಕ್ಷಿತ್ ಗಂಭೀರವಾಗಿ ಗಾಯಗೊಂಡ ಮಗು. ಘಟನೆ ವೇಳೆ ಮಗುವಿನ ಚೀರಾಟ ಕಂಡು ಜನರು ಹೊರ ಹೋಡಿ ಬಂದಿದ್ದಾರೆ. ಮಗುವಿನ ಮೇಲೆ ಕಾರು ಹರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಲಕ ಪ್ರಜ್ಞೆ ಇಲ್ಲದೆ ಬೇಜವಬ್ದಾರಿ ರೀತಿಯಲ್ಲಿ ಕಾರು ಚಾಲನೆ ಮಾಡಿದ್ದಾನೆ. ಪವಾಡ ಸದೃಶ್ಯದಂತೆ ಸಾವಿನಿಂದ ಮಗು ಪಾರಾಗಿದೆ.
KA-52 N-0460 ನಂಬರ್ ಮಾರುತಿ ಎಟ್ರಿಕಾ ಕಾರು ತಿರುವಿನಲ್ಲಿ ವೇಗವಾಗಿ ಬಂದು ಮಗುವಿನ ಮೇಲೆ ಹರಿದ ಪರಿಣಾಮ ಮಗುವಿನ ತಲೆ, ಮುಕ, ಬೆನ್ನಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಈ ಘಟನಾ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ʻದಿತ್ವಾʼ ಚಂಡಮಾರುತದ ಎಫೆಕ್ಟ್‌ಗೆ ಮಂಜಿನ ನಗರಿಯಾದ ಗಡಿ ಜಿಲ್ಲೆ ಬೀದರ್!



















