ರಾಜಧಾನಿಯಲ್ಲಿ ಬಿಎಂಟಿಸಿ ಬಸ್ಸ್‌ಗೆ ಮತ್ತೊಂದು ಜೀವ ಬಲಿಯಾಗಿದೆ. ವೃದ್ಧನೋರ್ವನ ಮೇಲೆ ಬಸ್ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಡಿವಾಳ ಪೊಲೀಸ್ ಠಾಣೆ ಮುಂಭಾಗದಲ್ಲಿ ನಡೆದಿದೆ.
ವೆಂಕಟರಾಮಯ್ಯ ಮೃತ ವ್ಯಕ್ತಿ. ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದೆಯಿಂದ ಬಂದ ಬಿಎಂಟಿಸಿ ಬಸ್ ವೃದ್ಧನಿಗೆ ಡಿಕ್ಕಿಯಾಗಿ, ಆತನ ತಲೆ ಮೇಲೆ ಹರಿದುಕೊಂಡು ಹೋದ ಪರಿಣಾಮ ಈ ಅವಘಾಡ ಸಂಭವಿಸಿದೆ.
ಸದ್ಯ ಈ ಘಟನಾ ಸಂಬಂಧ ಮಡಿವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಧರ್ಮಸ್ಥಳ ಬುರುಡೆ ಕೇಸ್ | 4,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಗೆ SIT ಸಿದ್ಧತೆ!



















