ಬೆಂಗಳೂರು : ಬೆಂಗಳೂರಿನಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಜೆ.ಪಿ. ನಗರದಲ್ಲಿ ಕಳೆದ ವಾರ ನಾಯಿಮರಿಗೆ ವ್ಯಕ್ತಯೋರ್ವ ಮನಸೋಯಿಚ್ಛೆ ಥಳಿಸಿ, ಚಿತ್ರಹಿಂಸೆ ನೀಡಿ ಕೊಂದಿದ್ದಾನೆ. ಈ ಬಗ್ಗೆ ಸಿಸಿಟಿವಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವ್ಯಕ್ತಿಯೊಬ್ಬ ನಾಯಿಮರಿಯನ್ನು ಗೋಡೆಗೆ ಎಸೆದು ಚಿತ್ರಹಿಂಸೆ ನೀಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇದೀಗ ಈ ವಿಡಿಯೋ ಹಾಗೂ ಪ್ರಾಣಿ ಪ್ರಿಯರ ದೂರಿನ ಆಧಾರದಲ್ಲಿ ದಕ್ಷಿಣ ಬೆಂಗಳೂರು ಪುಟ್ಟೇನಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡು ಆ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬೀದರ್ | ಬೈಕ್‌ನಲ್ಲಿ ತೆರಳುತ್ತಿದ್ದಾಗ ಗಾಳಿಪಟದ ದಾರ ಕುತ್ತಿಗೆ ಸೀಳಿ ವ್ಯಕ್ತಿ ದಾರುಣ ಸಾವು!



















