ಹಾಸನ: ಶಿಲ್ಪಕಲೆಗಳ ತವರೂರಲ್ಲಿ ಒಂದು ವಿಶೇಷ ಮುದುವೆ ನಡೆದಿದೆ. ಇಂಗ್ಲೆಂಡ್ ಮೂಲದ ಯುವಕನನ್ನು ವರಿಸಿದ ಬೇಲೂರಿನ ಯುವತಿಯು ಭಾರತೀಯ, ಹಿಂದೂ ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.
ಬೇಲೂರು ತಾಲೂಕಿನ ಇಬ್ಬೀಡು ಗ್ರಾಮದ ಯುವತಿಯ ವದು ಹೇಮಶ್ರೀ ಇಂಗ್ಲೆಂಡಿನ ವರ ಜಾಯ್ ಹಾಸನ ಜಿಲ್ಲೆ ಬೇಲೂರಿನಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ್ದಿದ್ದಾರೆ.

ಹೇಮಶ್ರೀ ಇಂಗ್ಲೆಂಡ್ ನಲ್ಲಿ ಒಂದುವರೆ ವರ್ಷದ ಹಿಂದೆ ವೃತ್ತಿ ಪ್ರಾರಂಭಿಸಿದ್ದರು. ಈ ವೇಳೆ ತನ್ನ ಜೊತೆ ಕೆಲಸ ಮಾಡುವ ಯುವಕನನ್ನು ಪ್ರೀತಿಸಿದ್ದಾರೆ. ವಿದೇಶಿ ಯುವಕನನ್ನು ಮದುವೆಯಾಗೋದಾಗಿ ತನ್ನ ಮನೆಯವರನ್ನು ಒಪ್ಪಿಸಿ, ಪ್ರೀತಿಸಿದ ಯುವಕನನ್ನು ಸಹ ಹಿಂದೂ ಸಂಪ್ರದಾಯದಂತೆ ಮದುವೆಗೆ ಒಪ್ಪಿಸಿ ಭಾರತೀಯ, ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ.

ವಿವಾಹ ಸಮಾರಂಭವು ಸಂಪ್ರದಾಯಬದ್ಧವಾಗಿ, ಸಂಭ್ರಮ ಹಾಗೂ ಸಂತಸದಿಂದ ನಡೆದಿದ್ದು, ಜಾಯ್ ಹಾಗೂ ಹೇಮಶ್ರಿಯ ಪೋಷಕರು ನವದಂಪತಿಗೆ ಆಶೀರ್ವಾದ ನೀಡಿ ಶುಭ ಹಾರೈಸಿದರು. ಸಂಬಂಧಿಕರು ಹಾಗೂ ಸ್ನೇಹಿತರು ಕೂಡ ಈ ಅಪರೂಪದ ವಿವಾಹಕ್ಕೆ ಸಾಕ್ಷಿಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತಂದೆಯ ಕಷ್ಟದ ದಿನಗಳನ್ನು ನೆನೆದು ಭಾವುಕರಾದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್



















