ಹಾಸನ: ಐತಿಹಾಸಿಕ ಬೇಲೂರಿನಲ್ಲಿ ಗಣೇಶ ವಿಗ್ರಹಕ್ಕೆ ಅಪಮಾನ ಪ್ರಕರಣವನ್ನು ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಬೇಲೂರು ಪಟ್ಟಣ ಬಂದ್ ನಡೆಸಲಾಯಿತು
ಹಾಸನ ನಗರದ ವಿಜಯನಗರ ಬಡಾವಣೆಯ ಮಾನಸಿಕ ಅಸ್ವಸ್ಥೆ ಮಹಿಳೆ ಲೀಲಮ್ಮ ಸೆ.20ರ ರಾತ್ರಿ ಗಣಪತಿ ದೇವಾಲಯಕ್ಕೆ ಗಣಪತಿ ಮೂರ್ತಿಗೆ ಚಪ್ಪಲಿ ಹಾರವನ್ನು ಹಾಕಿದ್ದಳು.
ಈಗಾಗಲೇ ಆರೋಪಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಸ್ವಸ್ಥ ಮಹಿಳೆಯ ಈ ಕೃತ್ಯದ ಹಿಂದೆ ಯಾರಿದ್ದಾರೆಂದು ತನಿಖೆ ನಡೆಸುವಂತೆ ಒತ್ತಾಯಿಸಿ ಬೇಲೂರು ಬಂದ್‌ಗೆ ಕರೆ ನೀಡಲಾಗಿತ್ತು.
ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಹುತೇಕ ಅಂಗಡಿ ಮುಂಗಟ್ಟು ವರ್ತಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಹಿಂದೂಪರ ಸಂಘಟನೆ ಕಾರ್ಯಕರ್ತರು ಬೇಲೂರಿನಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ಆಕ್ರೋಶ ಹೊರಹಾಕಿದರು.



















