ಬೆಂಗಳೂರು : ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ವೇಳೆ ಗುಂಡಿನ ದಾಳಿ ಪ್ರಕರಣದ ತನಿಖೆಯನ್ನು CIDಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡು ತೀವ್ರ ವಿವಾದ ಸೃಷ್ಟಿಸಿರುವ ಹಿನ್ನೆಲೆ ಸರ್ಕಾರ ಈ ಮಹತ್ವದ ನಿರ್ಣಯ ಕೈಗೊಂಡಿದೆ.
ಬ್ಯಾನರ್ ಗಲಾಟೆ ಹಾಗೂ ಗನ್ ಫೈರಿಂಗ್ ವಿಚಾರ ಬಳ್ಳಾರಿಯನ್ನ ತಲ್ಲಣಗೊಳಿಸಿದ್ದು, ಶಾಂತವಾಗಿದ್ದ ಜಿಲ್ಲೆ ರಕ್ತ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಇತ್ತ ಗಲಭೆ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ಹಲವು ವಿಡಿಯೋ ಸಾಕ್ಷ್ಯಗಳನ್ನ ರಿಲೀಸ್ ಮಾಡ್ತಾ ವೈರಲ್ ಮಾಡುತ್ತಿದೆ. ಹೀಗಾಗಿ ಪ್ರಕರಣವೂ ಕೂಡ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ.
ಇನ್ನು, ಈ ಕೇಸ್ ತನಿಖೆಯನ್ನು ಸಿಐಡಿಗೆ ವಹಿಸುವ ವಿಚಾರ ಸಂಬಂಧ ಈ ಹಿಂದೆಯೇ ಗೃಹ ಸಚಿವ ಪರಮೇಶ್ವರ್ ಸುಳಿವು ನೀಡಿದ್ದರು. ಅದರಂತೆ ಇದೀಗ ಈ ಗಲಾಟೆ ಪ್ರಕರಣದಲ್ಲಿ ದಾಖಲಾಗಿದ್ದ ಒಟ್ಟು ಆರು ಪ್ರಕರಣಗಳ ಪೈಕಿ ನಾಲ್ಕು ಪ್ರಕರಣಗಳನ್ನು ಸಿಐಡಿ ತನಿಖೆಗೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಮುಂದಿನ ಸೋಮವಾರ ಕೇಸ್ನ ಫೈಲ್ಗಳು ಸಿಐಡಿಗೆ ಹಸ್ತಾಂತರವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
25 ಆರೋಪಿಗಳಿಗೆ ಜಾಮೀನು ಮಂಜೂರು!
ಬಳ್ಳಾರಿ ಗಲಭೆ ಪ್ರಕರಣದ 25 ಆರೋಪಿಗಳಿಗೆ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಇಂದು ಜಾಮಿನು ಮಂಜೂರು ಮಾಡಿದೆ. ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಆಪ್ತ ಸೋಮಶೇಖರ್ ರೆಡ್ಡಿಯ ಗನ್ ಮ್ಯಾನ್ ಗುರುಚರಣ್ ಸಿಂಗ್ ಹೊರತುಪಡಿಸಿ, ಕ್ರೈಂ ನಂಬರ್ ನಾಲ್ಕರಲ್ಲಿ ಇರುವ 25 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಇದನ್ನೂ ಓದಿ : WPL | ಮುಂಬೈ ಎದುರು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ RCB



















