ಬೆಳಗಾವಿ : ಕಬ್ಬು ತುಂಬಿದ ಟ್ರ್ಯಾಕ್ಟರ್ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳ ಗ್ರಾಮದ ಹೋರವಲಯದಲ್ಲಿ ನಡೆದಿದೆ.
ಕಲ್ಲೋಳ ಬ್ರಿಡ್ಜ್ ಬಳಿ ಭೀಕರಅನಾಹುತ ನಡೆದಿದ್ದು, ಕಬ್ಬು ತುಂಬಿದ ಟ್ರ್ಯಾಕ್ಟರ್ ಬಂದು ಖಾಸಗಿ ಬಸ್‌ಗೆ ಗುದ್ದಿದೆ ಪರಿಣಾಮ ಬಸ್ ಪಲ್ಟಿಯಾಗಿದೆ. ಬಸ್ ಚಾಲಕನು ತನ್ನ ಸಮಯ ಪ್ರಜ್ಙೆಯಿಂದ ಪಲ್ಟಿ ಆಗುತ್ತಿದ್ದಂತೆ ರಸ್ತೆಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಪ್ರಕರಣವು ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ತಿರುವನಂತಪುರಂನಲ್ಲಿ ಕಮಲಕ್ಕೆ ಐತಿಹಾಸಿಕ ಜಯ : ಪ್ರಧಾನಿ ಮೋದಿ ಹೇಳಿದ್ದೇನು?



















