ಬೆಂಗಳೂರು: ನೀವು ಬಿಇ ಕೋರ್ಸ್ ಮುಗಿಸಿ ಒಳ್ಳೆಯ ಉದ್ಯೋಗಕ್ಕಾಗಿ ಕಾಯುತ್ತಿದ್ದೀರಾ? ಅದರಲ್ಲೂ, ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಎಂದು ಬಯಸುತ್ತಿದ್ದೀರಾ? ಹಾಗಾದರೆ, ನಿಮಗೊಂದು ಸುವರ್ಣಾವಕಾಶ ಇಲ್ಲಿದೆ. ಹೌದು, ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನ (BEL Trainee Engineer Recruitment 2025) ಸೆಂಟ್ರಲ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ ಖಾಲಿ ಇರುವ 35 ಟ್ರೈನಿ ಎಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಹುದ್ದೆಗಳು: 35
ಹುದ್ದೆ ಹೆಸರು: ಟ್ರೈನಿ ಎಂಜಿನಿಯರ್
ನೇಮಕಾತಿ ವಿಧಾನ: ನೇರ ಸಂದರ್ಶನ
ಸಂದರ್ಶನದ ದಿನಾಂಕ: ಸೆಪ್ಟೆಂಬರ್ 26
ಉದ್ಯೋಗ ಸ್ಥಳ: ಘಾಜಿಯಾಬಾದ್, ಉತ್ತರ ಪ್ರದೇಶ
ಕಂಪ್ಯೂಟರ್ ಸೈನ್ಸ್ ಆ್ಯಂ ಡ್ ಎಂಜಿನಿಯರಿಂಗ್, ಕಂಪ್ಯೂಟರ್ ಎಂಜಿನಿಯರಿಂಗ್, ಇನ್ಫಾರ್ಮೇಷನ್ ಟೆಕ್ನಾಲಜಿ, ಇನ್ಫಾರ್ಮೇಷನ್ ಸೈನ್ಸ್, ಸೈಬರ್ ಸೆಕ್ಯುರಿಟಿಯಲ್ಲಿ ಬಿಇ ಅಥವಾ ಬಿಟೆಕ್ ಕೋರ್ಸ್ ಮುಗಿಸಿದವರು ನೇರ ಸಂದರ್ಶನಕ್ಕೆ ಹಾಜರಾಗಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ನೇಮಕಾತಿ ಹೊಂದಿದವರಿಗೆ ಮಾಸಿಕ 30 ಸಾವಿರ ರೂಪಾಯಿಯಿಂದ 40 ಸಾವಿರ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ.
ಫ್ರೆಶರ್ ಗಳನ್ನೇ ನೇಮಕಾತಿ ಮಾಡಿಕೊಳ್ಳುತ್ತಿರುವುದರಿಂದ ಅನುಭವದ ಅಗತ್ಯವಿಲ್ಲ. ಗರಿಷ್ಠ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇದ್ದರೆ, ಎಸ್ಸಿ, ಎಸ್ಟಿಯವರಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಘಾಜಿಯಾಬಾದ್ ನ ಸೆಂಟ್ರಲ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ ಸೆಪ್ಟೆಂಬರ್ 26ರಂದು ಬೆಳಗ್ಗೆ 8 ಗಂಟೆಯಿಂದ ಸಂದರ್ಶನ ಆರಂಭವಾಗಲಿದೆ. ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.BEL Trainee Engineer Recruitment 2025: Apply for 35 Posts



















