ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನೆಲೋಗಲ್ ಗ್ರಾಮದಲ್ಲಿನ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ಜನರು ಆತಂಕ ಬೀಳುವಂತಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನೆಲೋಗಲ್ ಗ್ರಾಮದ ಸುತ್ತಮುತ್ತ ಆಗಾಗ ಕರಡಿ ಕಾಣಿಸುತ್ತಿತ್ತು. ಇದನ್ನು ಕಂಡು ಜನರು ಬೆಚ್ಚಿ ಬಿದ್ದಿದ್ದರು. ಹೀಗಾಗಿ ಅರಣ್ಯ ಸಿಬ್ಬಂದಿಗೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದಾರೆ. ಆದರೂ ಕರಡಿ ಇಂದಿಗೂ ಸೆರೆಯಾಗಿಲ್ಲ.
ದೇವಸ್ಥಾನ ಬಳಿ ಶನಿವಾರ ರಾತ್ರಿ ಕರಡಿ ಕಾಣಿಸಿಕೊಂಡಿದ್ದು, ಅದನ್ನು ಓಡಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ. ಅದನ್ನು ಸೆರೆ ಹಿಡಿಯಬೇಕೆಂಬ ಜನರ ಮನವಿಗೆ ಸ್ಪಂದಿಸದಿರುವುದಕ್ಕೆ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ.