ಚಿತ್ರದುರ್ಗ : ಹೊಸದುರ್ಗದ ಕುಂಚಿಟಿಗ ಮಠದ ಆವರಣದಲ್ಲಿ ಒಂದೇ ದಿನ ಚಿರತೆ ಹಾಗೂ ಕರಡಿ ಪ್ರತ್ಯಕ್ಷವಾಗಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದ ಕುಂಚಟಿಗ ಮಠದ ವೆಂಕಟೇಶ್ವರ ದೇವಾಲಯ ಬಳಿ ಇರುವ ಬಂಡೆಮೇಲೆ ಚಿರತೆ ಕಾಣಿಸಿಕೊಂಡಿದೆ. ಮಠದ ಮುಂದೆ ಕರಡಿ ಓಡಾಟದ ದೃಶ್ಯವನ್ನು ಭಕ್ತರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಪದೇ ಪದೇ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತಿರುವುದರಿಂದ ಜನರಲ್ಲಿಆತಂಕ ಮನೆಮಾಡಿದ್ದು, ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅರಣ್ಯ ಇಲಾಖೆಯವರನ್ನು ಆಗ್ರಹಿಸಿದ್ದಾರೆ.