ನಾಡಿನಲ್ಲಿ 2024ಕ್ಕೆ ಗುಡ್ ಬೈ ಹೇಳಲು ದಿನಗಣನೆ ಆರಂಭವಾಗಿದೆ. ಸಿಲಿಕಾನ್ ಸಿಟಿ ಜನರು 2024ಕ್ಕೆ ಗುಡ್ ಬೈ ಹೇಳಿ, 2025ನ್ನು ವೆಲ್ ಕಮ್ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ದುರ್ವರ್ತನೆ ನಡೆಯದಂತೆ ಕಟ್ಟೆಚ್ಚರ ವಹಿಸಲು ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಮುಂದಾಗಿದೆ.
ಈಗಾಗಲೇ ಜಂಟಿ ಸಭೆ ನಡೆಸಿರುವ ಪಾಲಿಕೆ ಹಾಗೂ ಪೊಲೀಸರು, ಹೊಸ ವರ್ಷಾಚರಣೆಯ ರೂಪುರೇಷೆಗಳನ್ನು ಸಿದ್ಧ ಮಾಡುತ್ತಿದ್ದಾರೆ.
ಡಿಸೆಂಬರ್ ತಿಂಗಳು ಮುಗಿಯುತ್ತಿದ್ದಂತೆ ಹೊಸ ವರ್ಷದ ತಯಾರಿ ಕೂಡ ಸದ್ದಿಲ್ಲದೆ ನಡೆಯುತ್ತಿದೆ. ಹೀಗಾಗಿ ಬೆಂಗಳೂರಿನ ಪೊಲೀಸರು ಹಾಗೂ ಪಾಲಿಕೆ ಅಲರ್ಟ್ ಆಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಗೈಡ್ ಲೈನ್ ಬಗ್ಗೆ ಪೊಲೀಸ್ ಇಲಾಖೆ ಜೊತೆ ಸಭೆ ನಡೆಸಿರೋ ಪಾಲಿಕೆ ಈ ಬಾರಿ ನ್ಯೂ ಇಯರ್ ಗೆ ಕೆಲವೊಂದು ರೂಲ್ಸ್ ಗಳನ್ನ ಜಾರಿಗೆ ತರಲು ಸಜ್ಜಾಗಿದೆ..
ಬೆಂಗಳೂರಿನ ನ್ಯೂ ಇಯರ್ ಹಾಟ್ ಸ್ಪಾಟ್ ಆಗಿರುವ ಎಂ.ಜಿ.ರೋಡ್,ಬ್ರಿಗೇಡ್ ರೋಡ್ ಗಳಲ್ಲಿ ಸಿಸಿಟಿವಿ ಸಂಖ್ಯೆಯನ್ನ ಕೂಡ ಹೆಚ್ಚಿಸೋಕೆ ಪೊಲೀಸ್ ಇಲಾಖೆ ಪಾಲಿಕೆಗೆ ಸೂಚನೆ ನೀಡಿದೆ. ಕಳೆದ 3 ವರ್ಷಗಳಿಂದ ಕೋವಿಡ್ ಇದ್ದ ಹಿನ್ನೆಲೆ ಕೇವಲ 200 ರಿಂದ 300ಸಿಸಿಟಿವಿ ಅಳವಡಿಕೆ ಮಾಡಲಾಗುತ್ತಿತ್ತು. ಈ ಬಾರಿ ಹೆಚ್ಚಿನ ಜನ ಸೇರುವ ನಿರೀಕ್ಷೆ ಇರೋದರಿಂದ ಸುಮಾರು 800 ಸಿಸಿಟಿವಿ ಅಳವಡಿಸುವಂತೆ ಪೊಲೀಸ್ ಇಲಾಖೆ ಬಿಬಿಎಂಪಿಗೆ ಸೂಚಿಸಿದೆ.
ರಾತ್ರಿ 1 ಗಂಟೆಯೊಳಗೆ ಹೊಸ ವರ್ಷಾಚರಣೆ ಮುಗಿಸಬೇಕು. ಎಂ.ಜಿ.ರಸ್ತೆ,ಬ್ರಿಗೇಡ್ ರಸ್ತೆ, ಇಂದಿರಾನಗರದಲ್ಲಿ ಆಚರಣೆಗೆ ಅನುಮತಿ ನೀಡಲಾಗುತ್ತಿದೆ. ತ್ರಿ 10 ಗಂಟೆ ಬಳಿಕ ಪ್ರಮುಖ ಫ್ಲೈ ಓವರ್ ಗಳು ಬಂದ್ ಆಗಲಿವೆ. ಎಂ.ಜಿ.ರಸ್ತೆ, ಬ್ರಿ ಗೇಡ್ ರಸ್ತೆಯಲ್ಲಿ 800ಕ್ಕೂ ಅಧಿಕ ಸಿಸಿಟಿವಿ ಅಳವಡಿಕೆ ಮಾಡಲಾಗುತ್ತಿದೆ. ರಾತ್ರಿ 8 ಗಂಟೆ ಬಳಿಕ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿರಲಿದೆ. ಸೆಲೆಬ್ರೇಷನ್ ಗೆ ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ.
ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸರ ನಿಯೋಜನೆ. ಬಾರ್, ಪಬ್ ಗಳಿಗೂ ರಾತ್ರಿ 1 ಗಂಟೆ ಬಳಿಕ ಬಂದ್ ಗೆ ಸೂಚನೆ ನೀಡಲಾಗಿದೆ. ನಗರದ ವಿವಿಧ ಭಾಗಗಳಲ್ಲಿ ಆಚರಣೆಗೆ ಅನುಮತಿ ಕಡ್ಡಾಯ ಮಾಡಲಾಗಿದೆ. ಲೌಡ್ ಸ್ಪೀಕರ್, ಪಟಾಕಿ ಸಿಡಿಸಲು ನಿರ್ಬಂಧ ಹೇರಲಾಗಿದೆ. ಹೀಗೆ ಹತ್ತು ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಯುಕ್ತರು ಸೇರಿದಂತೆ ಅರೋಗ್ಯ ಇಲಾಖೆಯ ಅಧಿಕಾರಿಗಳ ಮಹತ್ವದ ಸಭೆ ನಡೆಸಿದ್ದು. ಸಭೆಯಲ್ಲಿ ನ್ಯೂ ಇಯರ್ ಗೆ ಮತ್ತಷ್ಟು ಕಟ್ಟುನಿಟ್ಟಿನ ನಿಯಮಗಳು ಜಾರಿಗೆ ತರುವ ಸಾಧ್ಯತೆ ದಟ್ಟವಾಗಿದೆ.