ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹರಾಜಿಗಾಗಿ ಅಂತಿಮ ಪಟ್ಟಿ ಸಿದ್ಧವಾಗಿದೆ. ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದ 1355+35 (1390) ಆಟಗಾರರ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಅದರಂತೆ ಈ ಬಾರಿ 350 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ. ಇನ್ನು ಈ 350 ಆಟಗಾರರಲ್ಲಿ 240 ಭಾರತೀಯರು ಮತ್ತು 110 ವಿದೇಶಿ ಆಟಗಾರರು ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾ ಪರ ಆಡಿದ 16 ಆಟಗಾರರಿದ್ದಾರೆ. ಇನ್ನುಳಿದ 224 ಆಟಗಾರರು ದೇಶೀಯ ಟೂರ್ನಿ ಆಡಿದ ಕ್ರಿಕೆಟಿಗರು.
ಹಾಗೆಯೇ 110 ವಿದೇಶೀ ಆಟಗಾರರಲ್ಲಿ ರಾಷ್ಟ್ರೀಯ ತಂಡದ ಪರ ಆಡಿದ ಆಟಗಾರರ ಸಂಖ್ಯೆ 96. ಇನ್ನು ರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯದ 14 ವಿದೇಶಿ ಆಟಗಾರರು ಕೂಡ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಆಟಗಾರರ ಮೂಲ ಬೆಲೆ ಎಷ್ಟು?
ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 350 ಆಟಗಾರರಲ್ಲಿ 40 ಮಂದಿ ತಮ್ಮ ಮೂಲ ಬೆಲೆ 2 ಕೋಟಿ ರೂ. ಎಂದು ಘೋಷಿಸಿದ್ದಾರೆ. ಇನ್ನು 9 ಆಟಗಾರರ ಬೇಸ್ ಪ್ರೈಸ್ 1.50 ಕೋಟಿ ರೂ. ಹಾಗೆಯೇ 4 ಆಟಗಾರರು 1.25 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದಾರೆ.
17 ಆಟಗಾರರು 1 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡರೆ, 42 ಆಟಗಾರರು ತಮ್ಮ ಆರಂಭಿಕ ಬೆಲೆ 75 ಲಕ್ಷ ರೂ. ಎಂದು ತಿಳಿಸಿದ್ದಾರೆ. ಹಾಗೆಯೇ 50 ಲಕ್ಷ ರೂ. ಮೂಲ ಬೆಲೆ ಹೊಂದಿರುವ 4 ಆಟಗಾರರು, 40 ಲಕ್ಷ ರೂ. ಮೂಲ ಬೆಲೆ ಘೋಷಿಸಿರುವ 7 ಆಟಗಾರರು ಈ ಪಟ್ಟಿಯಲ್ಲಿದ್ದಾರೆ. ಇದಲ್ಲದೆ 30 ಲಕ್ಷ ರೂ. ಮೂಲ ಬೆಲೆಯೊಂದು 227 ಆಟಗಾರರ ಹೆಸರು ಕಾಣಿಸಿಕೊಂಡಿದೆ.
ಇದನ್ನೂ ಓದಿ : ಬೀದರ್‌ನಲ್ಲಿ ಘೋರ ದುರಂತ.. ತನ್ನದೇ ಶಾಲಾ ಬಸ್ಗೆ ಬಲಿಯಾದ 8 ವರ್ಷದ ಬಾಲಕಿ



















