ಬೆಂಗಳೂರು: ಐಪಿಎಲ್ 2025ರ (IPL 2025) ಆವೃತ್ತಿಗೆ ಇನ್ನೇನು ಆರಂಭವಾಗಲಿದೆ. ಅಂತೆಯೇ ಭಾರತೀಯ ಕ್ರಿಕೆಟ್ ತಂಡದ ಮೇಲೆ ಇತ್ತೀಚೆಗೆ ಜಾರಿಗೆ ತಂದ ಮಾರ್ಗಸೂಚಿಗಳನ್ನೇ ಬಿಸಿಸಿಐ 10 ಐಪಿಎಲ್ ಫ್ರಾಂಚೈಸಿಗಳಿಗೆ ಭಾಗಶಃ ವಿಸ್ತರಿಸಿದೆ. ಆಟಗಾರರ ಪ್ರಯಾಣವನ್ನು ತಂಡದ ಬಸ್ನಲ್ಲಿ ಮಾಡಬೇಕು ಸೇರಿದಂತೆ ಹಲವಾರು ನಿಯಮಗಳು ಇಲ್ಲಿ ಅನ್ವಯವಾಗಲಿದೆ.
ಪಂದ್ಯವಿಲ್ಲದ ದಿನಗಳಲ್ಲಿಯೂ ಡ್ರೆಸ್ಸಿಂಗ್ ಕೊಠಡಿಗಳಿಗೆ ಆಟಗಾರರ ಕುಟುಂಬ ಸದಸ್ಯರ ಪ್ರವೇಶವನ್ನು ನಿಷೇಧಿಸಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತದ ಸೋಲಿನ ನಂತರ, ಬಿಸಿಸಿಐ ಹಲವಾರು ಕಠಿಣ ನಿಯಮಗಳನ್ನು ಜಾರಿ ಮಾಡಿತ್ತು. ಅದೇ ನಿಯಮಗಳು ಇಲ್ಲಿಯೂ ಜಾರಿಯಾಗಲಿದೆ ಮೂಲಗಳು ಹೇಳಿವೆ.
IPL SOP: Bubble Transfer For India, England Players; No Vaccination https://t.co/3DiXczY8xr pic.twitter.com/2Q9CW764uC
— Zyite (@ZyiteGadgets) March 20, 2021
ಐಪಿಎಲ್ನಂಥ ಬಹು-ತಂಡಗಳ ಸ್ಪರ್ಧೆಯಲ್ಲಿ ಬಿಸಿಸಿಐನ ಎಲ್ಲ ಮಾರ್ಗಸೂಚಿಗಳನ್ನೇ ಅನ್ವಯಿಸಲು ಸಾಧ್ಯವಿಲ್ಲ, ಆದರೆ ಅವುಗಳಲ್ಲಿ ಕೆಲವು ನಿಯಮಗಳು ಜಾರಿಯಾಗವುದು ಖಚಿತ.
“ಆಟಗಾರರು ಅಭ್ಯಾಸಕ್ಕಾಗಿ ಬರುವಾಗ ತಂಡದ ಬಸ್ ಅನ್ನು ಬಳಸಬೇಕು. ತಂಡಗಳು ಎರಡು ಬ್ಯಾಚ್ಗಳಲ್ಲಿ ಪ್ರಯಾಣಿಸಬೆಕು, “ಎಂದು ಬಿಸಿಸಿಐ ಇತ್ತೀಚೆಗೆ ಎಲ್ಲಾ ಐಪಿಎಲ್ ತಂಡಗಳ ತಂಡದ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದೆ ಎನ್ನಲಾಗಿದೆ.
ಆಟಗಾರರ ಕುಟುಂಬಗಳಿಗೆ ಸಂಬಂಧಿಸಿದಂತೆ, ತರಬೇತಿ ದಿನಗಳಲ್ಲಿಯೂ ಅವರನ್ನು ಡ್ರೆಸ್ಸಿಂಗ್ ಕೋಣೆಗೆ ಅನುಮತಿ ನೀಡದಂತೆ ಹೇಳಲಾಗಿದೆ.
“ಅಭ್ಯಾಸದ ದಿನಗಳಲ್ಲಿ (ಪಂದ್ಯಾವಳಿಯ ಪೂರ್ವ ಮತ್ತು ಪಂದ್ಯಾವಳಿಯ ಸಮಯದಲ್ಲಿ), ಡ್ರೆಸ್ಸಿಂಗ್ ರೂಮ್ ಮತ್ತು ಆಟದ ಮೈದಾನದಲ್ಲಿ ಮಾನ್ಯತೆ ಪಡೆದ ಸಿಬ್ಬಂದಿಗೆ ಮಾತ್ರ ಅವಕಾಶವಿದೆ. ಆಟಗಾರ, ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಬೇರೆ ವಾಹನದಲ್ಲಿ ಪ್ರಯಾಣಿಸಬಹುದು. ಆತಿಥಿ ಪ್ರದೇಶದಿಂದ ಅಭ್ಯಾಸ ವೀಕ್ಷಿಸಬಹುದು.
“ವಿಸ್ತೃತ ಸಹಾಯಕ ಸಿಬ್ಬಂದಿಗೆ (ಸ್ಪೆಷಲಿಸ್ಟ್ / ನೆಟ್ ಬೌಲರ್ಗಳು ) ಪಟ್ಟಿಯನ್ನು ಬಿಸಿಸಿಐಗೆ ಅನುಮೋದನೆಗಾಗಿ ಸಲ್ಲಿಸಬೇಕಾಗಿದೆ. ಅನುಮೋದನೆ ಪಡೆದ ಬಳಿಕವಷ್ಟೇ ಪಂದ್ಯ ಇಲ್ಲದ ದಿನದ ಮಾನ್ಯತೆಗಳನ್ನು ನೀಡಲಾಗುವುದು” ಎಂದು ಬಿಸಿಸಿಐ ಟಿಪ್ಪಣಿಯಲ್ಲಿ ತಿಳಿಸಿದೆ.
ಬಿಸಿಸಿಐ ಕ್ರಮಕ್ಕೆ ಸ್ವಾಗತ
ಬಿಸಿಸಿಐ ಕೈಗೊಂಡ ಕ್ರಮಗಳನ್ನು ಫ್ರಾಂಚೈಸಿಯ ಉನ್ನತ ಅಧಿಕಾರಿಯೊಬ್ಬರು ಸ್ವಾಗತಿಸಿದರು.
“ನಮ್ಮ ಫ್ರಾಂಚೈಸಿಯಲ್ಲಿ, ಪಂದ್ಯವಿಲ್ಲದ ದಿನಗಳಲ್ಲಿಯೂ ಕುಟುಂಬಗಳು ಮತ್ತು ತಂಡದ ಮಾಲೀಕರಿಗೆ ಡ್ರೆಸ್ಸಿಂಗ್ ರೂಮ್ನಲ್ಲಿ ಅವಕಾಶವಿರಲಿಲ್ಲ. ಕೆಲವು ಆಟಗಾರರು ಪಂದ್ಯದ ನಂತರ ತಂಡದ ಬಸ್ನಲ್ಲಿ ಪ್ರಯಾಣಿಸದೇ ಪ್ರತ್ಯೇಕವಾಗಿ ಪ್ರಯಾಣಿಸುತ್ತಿದ್ದರು. ಈ ಋತುವಿನಿಂದ ಇದನ್ನು ಅನುಮತಿಸಲಾಗುವುದಿಲ್ಲ” ಎಂದು ಅಧಿಕಾರಿ ತಿಳಿಸಿದ್ದಾರೆ. ಹೆಚ್ಚುವರಿಯಾಗಿ, ಆಟಗಾರರು ತಮ್ಮ ಮಾನ್ಯತೆ ಕಾರ್ಡ್ ತರಲು ಮರೆತರೆ ಅಥವಾ ಸಡಿಲ ಮತ್ತು ಸ್ಲೀವ್ಲೆಸ್ ಬಟ್ಟೆಗಳನ್ನು ಧರಿಸಿ ಪಂದ್ಯದ ನಂತರದ ಕಾಣಿಸಿಕೊಂಡರೆ ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ: http://Select Virat kohli : ಅದ್ಭುತ ಇನಿಂಗ್ಸ್ ಆಡುತ್ತಿರುವ ವಿರಾಟ್ ಕೊಹ್ಲಿಯ ಶ್ರೇಯಾಂಕ ಏರಿಕೆ
” ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಮಾನ್ಯತೆ ಪಡೆದ ಸಿಬ್ಬಂದಿ ಪಂದ್ಯದ ದಿನದಂದು ತಮ್ಮ ಮಾನ್ಯತೆ ಪತ್ರ ತರುವುದು ಕಡ್ಡಾಯ. ಮಾನ್ಯತೆ ಹೊಂದಿಲ್ಲದಿದ್ದರೆ ಮೊದಲ ಬಾರಿಗೆ ಎಚ್ಚರಿಕೆ ನೀಡಲಾಗುವುದು. ಎರಡನೇ ಸಂದರ್ಭದಲ್ಲಿ, ತಂಡಕ್ಕೆ ದಂಡವನ್ನು ನೀಡಲಾಗುತ್ತದೆ.
“… ಪಂದ್ಯದ ನಂತರದ ಮಾತುಕತೆ ವೇಳೆ , ಫ್ಲಾಪಿಗಳು ಮತ್ತು ಸ್ಲೀವ್ ಲೆಸ್ ಜರ್ಸಿಯನ್ನು ಅನುಮತಿಸಲಾಗುವುದಿಲ್ಲ. ಪಾಲನೆ ಮಾಡಲು ವಿಫಲವಾದರೆ ಎಚ್ಚರಿಕೆ ನೀಡಲಾಗುತ್ತದೆ. ಪುನರಾವರ್ತನೆಯಾದರೆ ದಂಡ ವಿಧಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಬೌಂಡರಿ ಹಗ್ಗಗಳ ಹೊರಗೆ ಜಾಹೀರಾತು ಎಲ್ಇಡಿ ಬೋರ್ಡ್ ಮೇಲೆ ಹೊಡೆಯದಂತೆ ಮಂಡಳಿಯು ಬ್ಯಾಟರ್ಗಳಿಗೆ ಎಚ್ಚರಿಕೆ ನೀಡಿದೆ.
“ಹಿಟ್ಟಿಂಗ್ ನೆಟ್ಗಳನ್ನು ಒದಗಿಸಿದರೂ, ಆಟಗಾರರು ಎಲ್ಇಡಿ ಬೋರ್ಡ್ಗಳಿಗೆ ಹೊಡೆಯುತ್ತಲೇ ಇರುತ್ತಾರೆ,” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಎಲ್ಇಡಿ ಬೋರ್ಡ್ಗಳ ಮುಂದೆ ಕುಳಿತುಕೊಳ್ಳಬಾರದು. ಪ್ರಾಯೋಜಕತ್ವ ತಂಡವು ಎಫ್ಒಪಿಯಾದ್ಯಂತ ಟವೆಲ್ ಮತ್ತು ನೀರಿನ ಬಾಟಲಿಗಳನ್ನು ಹೊತ್ತ ಬದಲಿ ಆಟಗಾರರು ಕುಳಿತುಕೊಳ್ಳಬಹುದಾದ ಸ್ಥಳಗಳನ್ನು ಗುರುತಿಸುತ್ತದೆ” ಎಂದು ಮಂಡಳಿ ತಿಳಿಸಿದೆ.