ಬೆಂಗಳೂರು: ಕಾಂಗ್ರೆಸ್ ಸರ್ಕಾರ ಇತ್ತೀಚೆಗಷ್ಟೇ ಮನೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ವಾಹನಗಳಿಗೂ ತೆರಿಗೆ ವಿಧಿಸಿತ್ತು. ಈ ಕುರಿತು ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.
ವಸತಿ ನಿವೇಶನಗಳ ಪಾರ್ಕಿಂಗ್ ಗೆ ಚದರ ಅಡಿಗೆ 2 ರೂ. ಕಮರ್ಷಿಯಲ್ ಕಟ್ಟಡಗಳಲ್ಲಿ ವಾಹನ ಪಾರ್ಕಿಂಗ್ ಗೆ 3 ರೂ. ನಿಗದಿ ಮಾಡಲಾಗಿತ್ತು. ಈ ಕುರಿತು ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ ಈ ಹೊಸ ತೆರಿಗೆ ಪದ್ಧತಿಗೆ ತಿದ್ದುಪಡಿ ಮಾಡಿ, ಹೊಸ ದರ ನಿಗದಿಗೆ ಬಿಬಿಎಂಪಿ ಮುಂದಾಗಿದೆ.
ಈ ಹಿಂದೆ ಮನೆ ಕಾಂಪೌಂಡ್ ನಲ್ಲಿ ವಾಹನ ಪಾರ್ಕಿಂಗ್ ಮಾಡಿದರೆ ಚದರ ಅಡಿಗೆ 2 ರೂ. ನಿಗದಿ ಮಾಡಲಾಗಿತ್ತು. ಈಗ ಈ ದರವನ್ನು 1 ರೂ.ಗೆ ಇಳಿಸಲಾಗಿದೆ. ಈ ಕುರಿತು ಈಗಾಗಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ, ಈ ವೇಳೆ ವಸತಿ ಪಾರ್ಕಿಂಗ್ ತೆರಿಗೆ ಕಡಿಮೆ ಮಾಡಲು ಕೂಡ ಡಿಸಿಎಂ ಸಲಹೆ ನೀಡಿದ್ದಾರೆ.
ಕರ್ನಾಟಕ ನ್ಯೂಸ್ ಬೀಟ್ ವರದಿಯಿಂದಾಗಿ ಮುಂದಿನ ತಿಂಗಳಿಂದ ಈ ಹೊಸ ಪಾರ್ಕಿಂಗ್ ತೆರಿಗೆ ನೀತಿ ಜಾರಿಗೆ ಬರಲಿದೆ. ಮುಂದಿನ ವರ್ಷದ ಅಸ್ತಿ ತೆರಿಗೆ ವಸೂಲಿ ಸಮಯದಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತದೆ.