ಬೆಂಗಳೂರು : ಡಿಸೆಂಬರ್ ಗೆ ಬಿಬಿಎಂಪಿಯ ಐದು ಪಾಲಿಕೆಗಳ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ ಎಂಬ ದಾಖಲೆ ಈಗ ಲಭ್ಯವಾಗಿದೆ.
ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರೋ ಅಫಿಡವಿಟ್ ಸುದ್ದಿವಾಹಿನಿಗಳಿಗೆ ಲಭ್ಯವಾಗಿದ್ದು, ಡಿಸೆಂಬರ್ 31ಕ್ಕೆ ಸುಪ್ರೀಂಗೆ ಪ್ರಮಾಣ ಪತ್ರವನ್ನು ಸರ್ಕಾರ ಸಲ್ಲಿಸಿರುವ ಸಾಧ್ಯತೆ ಇದೆ.
ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಲಿದ್ದಾರೆ.
26 ಪುಟಗಳ ಪ್ರಮಾಣ ಪತ್ರದಲ್ಲಿ ಏನಿರಲಿದೆ ಗೊತ್ತಾ ?
-ಬಿಬಿಎಂಪಿ ಐದು ಪಾಲಿಕೆಗಳ ಗಡಿ ಗುರುತಿಸಿ ಪ್ರಮಾಣ ಪತ್ರ ಸಲ್ಲಿಕೆ.
-ಐದು ಪಾಲಿಕೆಗೆ ಚುನಾವಣೆ ನಡೆಸಲು ಸಿದ್ದವಿರುವುದಾಗಿ ಪ್ರಮಾಣ ಪತ್ರ ಸಲ್ಲಿಕೆ.
ಬಿಬಿಎಂಪಿ ಐದು ಪಾಲಿಕೆಗಳು ಯಾವುವು ?
-ಬೆಂಗಳೂರು ಪಶ್ಚಿಮ ನಗರ ಪಾಲಿಕೆ
-ಬೆಂಗಳೂರು ದಕ್ಷಿಣ ನಗರ ಪಾಲಿಕೆ
-ಬೆಂಗಳೂರು ಕೇಂದ್ರ ನಗರ ಪಾಲಿಕೆ
– ಬೆಂಗಳೂರು ಪೂರ್ವ ನಗರ ಪಾಲಿಕೆ
– ಬೆಂಗಳೂರು ಉತ್ತರ ನಗರ ಪಾಲಿಕೆ
ಪ್ರಮಾಣ ಪತ್ರದಲ್ಲಿ ಏನಿದೆ..?
– 2024 ಕ್ಕೆ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿ ಮಾಡಲಾಗಿದೆ..
-ಬೆಂಗಳೂರಿನ ವ್ಯಾಪ್ತಿ ವಿಸ್ತರಣೆಯಾಗಿದೆ.
– ಪುರಸಭೆಗಳ ಪುನರಚನೆ ಮಾಡಲಾಗಿದೆ.
-ನಿರ್ವಹಣೆಯನ್ನು ಪರಿಣಾತ್ಮಕವಾಗಿ ಮಾಡಬೇಕಿದೆ.
-ಸದ್ಯ ಬೆಂಗಳೂರಿನಲ್ಲಿ 144 ಕೋಟಿ ಜನಸಂಖ್ಯೆ ಇದೆ.
-ಹೊಸ ಭೂ-ಆರ್ಥಿಕ ಯೋಜನೆಗಳ ನಿರ್ವಹಣೆ ಮಾಡಬೇಕಿದೆ.
-2011 ರಲ್ಲಿ ಬೆಂಗಳೂರಿನ ಜನಸಂಖ್ಯೆ 84 ಲಕ್ಷ ಇತ್ತು.
-13 ವರ್ಷದಲ್ಲಿ ಬೆಂಗಳೂರಿನ ಜನಸಂಖ್ಯೆ 60 ಲಕ್ಷ ಹೆಚ್ಚಾಗಿದೆ.
-ಜನಸಂಖ್ಯೆ ಹೆಚ್ಚಾಗಿದ್ದರಿಂದ ಆಡಳಿತ ಮರುಸಂರಚನೆ ಮಾಡಬೇಕಿದೆ.


















