ಬೆಂಗಳೂರು: ಬಿಬಿಎಂಪಿ ಕಸದ ಟೆಂಡರ್ ಕೊಡಿಸುವುದಾಗಿ ವ್ಯಕ್ತಿಯೊಬ್ಬ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ನಡೆದಿದೆ.
ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಗ್ರಾಮಾಂತರದ ಹೇರೋಹಳ್ಳಿಯಲ್ಲಿ ನಡೆದಿದೆ. ಸೌಭಾಗ್ಯ ಎಂಬ ಮಹಿಳೆಗೆ ಟೆಂಡರ್ ಕೊಡಿಸುವುದಾಗಿ ಪಕ್ಕದ ಮನೆಯ ಹರೀಶ್ ವಂಚಿಸಿದ್ದಾನೆಂದು ಮಹಿಳೆ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಎಫ್ ಐಆರ್(FIR) ದಾಖಲಾಗಿದೆ.
ಹರೀಶ್, ನಿಮಗೆ ಟೆಂಡರ್ ಕೊಡಿಸುತ್ತೇನೆ. ನಿಮ್ಮ ಬಳಿ ಇರುವ ಚಿನ್ನಾಭರಣ(gold) ಒತ್ತೆ ಇಟ್ಟು ಹಣ ತಂದು ಕೊಡಿ ಎಂದು ಹೇಳಿದ್ದಕ್ಕೆ ಮಹಿಳೆ 90 ಗ್ರಾಂ ಚಿನ್ನ ಅಡ ಇಟ್ಟಿದ್ದರು ಎನ್ನಲಾಗಿದೆ.
ಗೋಪಾಲ್ ಹಾಗೂ ಪಿಳ್ಳರಾಜು(Pillaraju) ಎಂಬುವವರನ್ನು ಸಾಕ್ಷಿ ಇಟ್ಟು ಹಣ (money)ಹಾಗೂ ಚಿನ್ನಾಭರಣವನ್ನು ಮಹಿಳೆ ನೀಡಿದ್ದರು. ಆದರೆ ಎರಡು ವರ್ಷದಿಂದ ಯಾವುದೇ ಟೆಂಡರ್ ಕೊಡಿಸಿಲ್ಲ. ಕೇಳಿದರೆ ಏನೇನೋ ಹೇಳುತ್ತಿದ್ದ. ಮರಳಿ ಹಣ ನೀಡುವಂತೆ ಕೇಳಿದರೆ ಹಣ ನೀಡುತ್ತಿಲ್ಲ ಎಂದು ಮಹಿಳೆ ದೂರು ದಾಖಲಿಸಿದ್ದಾರೆ.