ಬೆಂಗಳೂರು : ಆರ್ ಆರ್. ನಗರ ವಲಯದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಮಂದಾಗಿದೆ. ಸುಮಾರು ೧೦೦ಕ್ಕೂ ಹೆಚ್ಚು ಬೀದಿ ಬದಿ ಅಂಗಡಿಗಳನ್ನು ಪಾಲಿಕೆಯ ಸಿಬ್ಬಂದಿಗಳು ತೆರವು ಮಾಡಿದ್ದಾರೆ.
ಪಾದಚಾರಿ ಮಾರ್ಗ ಗಳನ್ನು ಒತ್ತುವರಿ ಮಾಡಿ ನಿರ್ಮಾಣ ಮಾಡಿರುವ ಅಂಗಡಿಗಳನ್ನು ತೆರವು ಮಾಡಲಾಗಿದೆ. ಸಾರ್ವಜನಿಕರಿಂದ ಮೇಲಿಂದಮೇಲೆ ಬರುತ್ತಿರುವ ದೂರಿನ ಆಧಾರ ಮೇಲೆ ಬಿಬಿಎಂಪಿ ಈ ಕಾರ್ಯಾಚರಣೆಗೆ ಮುಂದಾಗಿದೆ.


















