ಬಿಬಿಎಂಪಿಯಿಂದ ಹೊಸ ಎಫ್ ಎಅರ್ ಯೋಜನೆ ಜಾರಿಯಾಗಿದ್ದು, ಎಫ್ ಎಅರ್ ಅಂದರೆ, ಪ್ರೀಮಿಯಂ ಪ್ಲೋರ್ ಏರಿಯಾ ಅನುಪಾತ. ಈ ಯೋಜನೆಯಿಂದ ಕಟ್ಟಡ ಮಾಲೀಕರಿಗೆ ವರದಾನವಾಗಲಿದೆ.
ಈ ಯೋಜನೆಯಿಂದ ಪ್ರಮುಖವಾಗಿ ಬಿಲ್ಡರ್ ಗಳಿಗೆ ಲಾಭವಾಗಲಿದೆ. ಕಟ್ಟಡ ನಕ್ಷೆ ಮೀರಿ ಹೆಚ್ಚುವರಿ ಪ್ಲೋರ್ ಕಟ್ಟಿದವರಿಗೆ ಈ ಯೋಜನೆ ಅನ್ವಯವಾಗಲಿದೆ. ಈಗಾಗಲೇ ಈ ಯೋಜನೆಯಡಿ ಬಿಬಿಎಂಪಿ ಅರ್ಜಿ ಸ್ವೀಕರಿಸುತ್ತಿದೆ. ಈ ಯೋಜನೆಯಿಂದಾಗಿ ಪಾಲಿಕೆಗೆ ಪ್ರತಿ ವರ್ಷ 2 ಸಾವಿರ ಕೋಟಿ ಆದಾಯ ಹರಿದು ಬರುವ ಸಾಧ್ಯತೆ ಇದೆ.
ಈ ಯೋಜನೆ ಬೆಂಗಳೂರು ಸೇರಿದಂತೆ ಕನಕಪುರ, ನೆಲಮಂಗಲ, ಹೊಸಕೋಟೆ ಸೇರಿದಂತೆ 9 ಉಪನಗರ ಪ್ರದೇಶಕ್ಕೂ ಅನ್ವಯವಾಗಲಿದೆ. ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವ ಮಾಲೀಕರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ.
ಉದಾಹರಣೆಗೆ ನೋಡುವುದಾದರೆ, ಹೊಸದಾಗಿ ನೀವು 12 ಸಾವಿರ ಅಡಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದರೆ, ನಿಮಗೆ ನಾಲ್ಕು ಅಂತಸ್ತಿನ ಕಟ್ಟಡ ಕಟ್ಟುವುದಕ್ಕೆ ಪ್ಲಾನ್ ಅನುಮತಿಯನ್ನು ಬಿಬಿಎಂಪಿ ನೀಡುತ್ತದೆ. 12 ಸಾವಿರ ಅಡಿಗೆ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡುವ ಅವಕಾಶವಿರುತ್ತದೆ. ಆದರೆ, 12 ಸಾವಿರ ಅಡಿಗೆ 6 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಪಾಲಿಕೆ ಅನುಮತಿ ನೀಡುವುದಿಲ್ಲ.
ಆಗ ನೀವು ಎಫ್ ಎಅರ್ ಯೋಜನೆಯಡಿ ಅರ್ಜಿ ಸಲ್ಲಿಸಬೇಕು. ಹಾಗಾದರೆ ಹೆಚ್ಚುವರಿ 6 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಸಿಗುತ್ತದೆ. ಆದರೆ, ಹೆಚ್ಚುವರಿ 6 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಪ್ಲಾನ್ ಕೊಡುತ್ತಾರೆ. ಇದಕ್ಕೆ ನೀವು ನಿವೇಶನದ ಮಾರ್ಗಸೂಚಿ ದರದ ಶೇ. 50ರಷ್ಟು ಶುಲ್ಕವನ್ನು ಬಿಬಿಎಪಿಗೆ ಪಾವತಿ ಮಾಡಬೇಕು.