ಬೆಂಗಳೂರು: ವಲಯವಾರು ಬಜೆಟ್(budget) ಮಂಡಿಸುವ ಚಿಂತನೆಯಿಂದ ಹಿಂದೆ ಸರಿದಿರುವ ಬಿಬಿಎಂಪಿ (bbmp) ಒಂದೇ ಬಾರಿ ಮಂಡಿಸುವ ನಿರ್ಧಾರಕ್ಕೆ ಮುಂದಾಗಿದೆ.
ಇತ್ತೀಚೆಗಷ್ಟೇ ಎಂಟು ವಲಯಗಳಲ್ಲೂ ಐಎಎಸ್ (IAS) ಅಧಿಕಾರಿಗಳಿಂದ ಪ್ರತ್ಯೇಕ ಬಜೆಟ್ ಮಂಡಿಸುವ ಕುರಿತು ಅಧ್ಯಯನ ನಡೆಸಲಾಗಿತ್ತು. ಆದರೆ, ವಲಯವಾರು ಬಜೆಟ್ ಮಂಡನೆಯಿಂದ ಅಸಮತೋಲನವಾಗುತ್ತಿರುವುದನ್ನು ಮನಗಂಡು ಆ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ. ಹೀಗಾಗಿ ಹಿಂದೆನಂತೆಯೇ ಕೇಂದ್ರಿಕೃತ ಬಜೆಟ್ ಮಂಡನೆಗೆ ಪಾಲಿಕೆ ಸಿದ್ದತೆ ಮಾಡಿಕೊಂಡಿದೆ.
ಹಿಂದಿನ ವರ್ಷ ಬಿಬಿಎಂಪಿಗೆ ಸಂಬಂಧಿಸಿದಂತೆ 13 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡಿಸಲಾಗಿತ್ತು. ಈ ಬಾರಿ 2025-26ನೇ ಸಾಲಿನ ಬಜೆಟ್ ಗಾತ್ರವನ್ನು 14 ಸಾವಿರ ಕೋಟಿ ರೂ. ಗೆ ಏರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ(CM Siddaramaiah) ಬಿಬಿಎಂಪಿ ಅಧಿಕಾರಿಗಳ ಜೊತೆ ಮೊದಲ ಸುತ್ತಿನ ಸಭೆ ನಡೆಸಿದ್ದಾರೆ. ಅಲ್ಲದೇ, ಫೆಬ್ರವರಿಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಆ ಸಭೆಯಲ್ಲೇ ಬಿಬಿಎಂಪಿ ಬಜೆಟ್ ಗಾತ್ರ ಹಾಗೂ ದಿನಾಂಕ್ ಫಿಕ್ಸ್ ಮಾಡುವ ಸಾಧ್ಯತೆ ಇದೆ.