ಬೆಂಗಳೂರು: ಬಿಬಿಎಂಪಿ ಚುನಾವಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಚುನಾವಣೆ ನಡೆಸಲು ಬಿಜೆಪಿಯಿಂದ ತಂಡ ರಚಿಸಲಾಗಿದೆ.
ಈಗಾಗಲೇ ಚುನಾವಣೆ ನಡೆಸುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ಕೂಡ ನಡೆಯುತ್ತಿದೆ. ಕೋರ್ಟ್ ತೀರ್ಪು ಬಂದ ಮೇಲೆ ತ್ವರಿತವಾಗಿ ಬಿಬಿಎಂಪಿ ಚುನಾವಣೆ ನಡೆಯುವಂತೆ ನೋಡಿಕೊಳ್ಳಲು ಬಿಜೆಪಿಯ ಪ್ರಮುಖ ನಾಯಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ರಚಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.

ಈ ಸಮಿತಿಯ ಸದಸ್ಯರು ಯಾರು?
ಮುನಿರತ್ನ- ಶಾಸಕ
ಎಸ್. ಆರ್. ವಿಶ್ವನಾಥ್- ಶಾಸಕ
ಎಂ.ಕೃಷ್ಣಪ್ಪ- ಶಾಸಕ
ರವಿ ಸುಬ್ರಮಣ್ಯ- ಶಾಸಕ
ಅಶ್ವಥ್ ನಾರಾಯಣ್- ರಾಜ್ಯ ಮುಖ್ಯ ವಕ್ತಾರ
ಎಸ್. ಹರೀಶ್- ಜಿಲ್ಲಾ ಅಧ್ಯಕ್ಷರು, ಬೆಂಗಳೂರು ಉತ್ತರ
ಎ.ಆರ್. ಸಪ್ತಗಿರಿಗೌಡ- ಜಿಲ್ಲಾ ಅಧ್ಯಕ್ಷರು ಬೆಂಗಳೂರು ಕೇಂದ್ರ
ಸಿ.ಕೆ. ರಾಮಮೂರ್ತಿ- ಜಿಲ್ಲಾ ಅಧ್ಯಕ್ಷರು, ಬೆಂಗಳೂರು ದಕ್ಷಿಣ