ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಅನಧಿಕೃತ ಪಿಜಿಗಳ ಮೇಲೆ ಮತ್ತೆ ಜಿಬಿಎ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದಾರೆ. ಸಾರ್ವಜನಿಕ ವಲಯಗಳಿಂದ ಪಿಜಿಗಳ ವಿರುದ್ದ ಸಾಕಷ್ಟು ದೂರು ಬರುತ್ತಿವೆ ಎಂದು ಬಿಬಿಎಂಪಿ ತಿಳಿಸಿದೆ.
ಪಿಜಿ ನಡೆಸಲು ಪಾಲಿಕೆ ಲೈಸೆನ್ಸ್ ಕಡ್ಡಾಯವಾಗಿದ್ದರೂ ಕೂಡ ಪಾಲಿಕೆ ನಿಯಮಗಳನ್ನು ಗಾಳಿಗೆ ತೂರಿ ಕೆಲ ಪಿಜಿಗಳು ತನ್ನದೇ ದರ್ಬಾರ್ ನಡೆಸುತ್ತಿದೆ. ರಾಜಾರೋಷವಾಗಿ ಲೈಸೆನ್ಸ್ ಇಲ್ಲದ ಪಿಜೆ ನಡೆಸುತಿರುವ ಕೆಲ ಮಾಲೀಕರ ಮೇಲೆ ಇದೀಗ ಬಿಬಿಎಂಪಿ ದಾಳಿ ನಡೆಸಲು ಸಜ್ಜಾಗಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ಪಿಜಿಗಳಿಗೆ ಕೂಡಲೇ ಲೈಸನ್ಸ್ ಪಡೆಯುವಂತೆ ಎಚ್ಚರಿಕೆ ನೀಡಿದೆ. ಈ ಬಗ್ಗೆ ಬೆಂಗಳೂರು ಪೂರ್ವ ನಗರ ಪಾಲಿಕೆಯ ಲೋಖಂಡೆ ಸ್ನೇಹಲ್ ಸುಧಾಕರ್ ಆದೇಶ ಹೊಡಿಸಿದ್ದಾರೆ.
ಪಿಜಿಗಳು ಪಾಲಿಸಬೇಕಾದ ನಿಯಮಗಳೇನು ?
- ಲೈಸೆನ್ಸ್ ಪಡೆಯದೇ ಅನಧಿಕೃತವಾಗಿ ಪಿಜ ನಡೆಸುವುದು
- ಪಾಲಿಕೆ ನೀಡಿದ ಗೈಡ್ ಲೈನ್ಸ್ ಗಳನ್ನು ಗಾಳಿ ತೂರಿರುವುದು
- ವಸತಿ ವಲಯಗಳಲ್ಲಿ ಅನುಮತಿಯಿಲ್ಲದೆ ವಾಹಿವಾಟು ಮಾಡುತ್ತಿರುವುದು
- ಮೂಲಭೂತ ಸುರಕ್ಷತೆ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸದೇ ಇರುವುದು.
- ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು
- ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡದೆ ಇರುವುದು
ಇದನ್ನೂ ಓದಿ : ಚೇತರಿಸಿಕೊಳ್ಳುತ್ತಿದ್ದೇನೆ.. ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ಶ್ರೇಯಸ್ ಅಯ್ಯರ್!



















