ಬೆಂಗಳೂರು: ಬಾಕಿ ಆಸ್ತಿ ತೆರಿಗೆ ಕಟ್ಟುವಂತೆ ಬಿಬಿಎಂಪಿ (BBMP)ನೀಡಿದ್ದ ನೋಟಿಸ್ ಗೆ ಕಟ್ಟಡ ಮಾಲೀಕರು ಬೆಚ್ಚಿ ಬಿದ್ದಿದ್ದಾರೆ.ಬಾಕಿ ಅಸ್ತಿ ತೆರಿಗೆ (Property tax)ಕಟ್ಟುವಂತೆ ಪಾಲಿಕೆಯಿಂದ ಕಟ್ಟಡ ಮಾಲೀಕರಿಗೆ ಹರಾಜು ನೋಟಿಸ್ ನೀಡಲಾಗಿತ್ತು. ಫೆ. 4ರ ಒಳಗೆ ಬಾಕಿ ತೆರಿಗೆ ಕಟ್ಟದಿದ್ದರೆ ಕಟ್ಟಡ ಹರಾಜು ಹಾಕುತ್ತೇವೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿತ್ತು.
ಪ್ರತಿ ವಲಯದಲ್ಲಿ ಒಂದೊಂದು ಆಸ್ತಿ ಕಟ್ಟಡ(Property tax) ಮಾಲೀಕರಿಗೆ ನೋಟಿಸ್ (NOTICE)ನೀಡಲಾಗಿತ್ತು. ಹೀಗೆ ಒಟ್ಟು 8 ಕಟ್ಟಡಗಳಿಗೆ ನೋಟಿಸ್ ನೀಡಲಾಗಿತ್ತು. ಇದಕ್ಕೆ ಭಯಬಿದ್ದ 7 ಕಟ್ಟಡಗಳ ಮಾಲೀಕರು ಬಾಕಿ ತೆರಿಗೆ ಪಾವತಿ ಮಾಡಿದ್ದಾರೆ. ಹರಾಜು (Auction)ನೋಟಿಸ್ ಬರುತ್ತಿದ್ದಂತೆ ಶೇ. 90ರಷ್ಟು ಕಟ್ಟಡಗಳ ಬಾಕಿ ತೆರಿಗೆ ಪಾವತಿ ಮಾಡಿದ್ದಾರೆ.
ಈಗ ಮತ್ತೆ ವಲಯವಾರು ಬಾಕಿ ತೆರಿಗೆ ಆಸ್ತಿ ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ. ಒಟ್ಟು 640 ಕಮರ್ಷಿಯಲ್ ಕಟ್ಟಡಗಳಿಗೆ (commercial buildings)ನೋಟಿಸ್ ನೀಡಲಾಗಿದೆ.