ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12ರಲ್ಲಿ ಕಿರುತೆರೆ ನಟ ಧ್ರುವಂತ್ ಅವರ ಧ್ವನಿ ಜೋರಾಗಿದೆ. ಧ್ರುವಂತ್ ಈಗಾಗಲೇ ರಕ್ಷಿತಾ ಹಾಗೂ ಗಿಲ್ಲಿ ಮೇಲೆ ವಿಷಕಾರುತ್ತಿದ್ದಾರೆ. ಇದೀಗ ಧ್ರುವಂತ್ ಅವರೇ ದೊಡ್ಮನೆಯಲ್ಲಿ ಕೆಲವರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ರಾಶಿಕಾ ಬಗ್ಗೆ ಅವರು ಇಲ್ಲಸಲ್ಲದ ಆರೋಪ ಮಾಡಿದ್ದು, ಕಾವ್ಯ ಬಳಿ ಹೋಗಿ ಧ್ರುವಂತ್ ನೀಡಿದ ಹೇಳಿಕೆ ಮನಯೊಳಗೆ ದೊಡ್ಡ ಜಗಳಕ್ಕೆ ಕಾರಣ ಆಗಿದೆ.

ಹೌದು.. ಧ್ರುವಂತ್ ವಿರುದ್ಧ ರಾಶಿಕಾ ಶೆಟ್ಟಿ ಮತ್ತು ಕಾವ್ಯ ಶೈವ ಅವರು ತಿರುಗಿ ಬಿದ್ದಿದ್ದಾರೆ. ನವೆಂಬರ್ 10ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದ್ದು, ಕಾವ್ಯ ಬಳಿ ಹೋದ ಧ್ರುವಂತ್, ರಾಶಿಕಾ ಅವರು ನನ್ನತ್ರ ಬಂದ್ರು, ಆಮೇಲೆ ಅಭಿಷೇಕ್ ಹತ್ರ ಹೋದರು. ಆದ್ರೆ ವರ್ಕ್ ಆಗಲಿಲ್ಲ. ನಂತರ ಸೂರಜ್ ಹತ್ತಿರ ಹೋದರು ಎಂದು ಹೇಳಿದ್ದಾರೆ. ಅದು ರಾಶಿಕಾ ಅವರಿಗೆ ಕೋಪ ತರಿಸಿದೆ.

ಇನ್ನು, ‘ಹೆಣ್ಮಕ್ಕಳ ಜೊತೆ ಮಾತಾಡೋಕೆ ನನಗೆ ಇಷ್ಟ ಇಲ್ಲ’ ಎಂದು ಧ್ರುವಂತ್ ಹೇಳಿದ್ದಾರೆ. ‘ನಿಮ್ಮ ಜೊತೆ ಮಾತಾಡೋಕೆ ಹೆಣ್ಮಕ್ಕಳಿಗೆ ಇಷ್ಟ ಇಲ್ಲ’ಎಂದು ಕಾವ್ಯ ಅವರು ತಿರುಗೇಟು ನೀಡಿದ್ದಾರೆ. ಹೀಗೆ ರಾಶಿಕಾ ಬಗ್ಗೆ ಅವರು ಇಲ್ಲಸಲ್ಲದ ಆರೋಪ ಮಾಡಿ ಕಾವ್ಯ ಬಳಿ ಹೋಗಿ ಧ್ರುವಂತ್ ನೀಡಿದ ಹೇಳಿಕೆ ದೊಡ್ಡ ಜಗಳಕ್ಕೆ ಕಾರಣ ಆಗಿದೆ.

ಇದನ್ನೂ ಓದಿ : ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್‌ಗೆ ಮತ್ತೆ ಜೀವ ಬೆದರಿಕೆ



















