ಬಿಗ್ಬಾಸ್ನ ಇವತ್ತಿನ ಎಪಿಸೋಡ್ನಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ಮಧ್ಯೆ ಘನಘೋರ ಮಾತಿನ ಯುದ್ಧ ನಡೆದಿದ್ದು, ಕೊನೆಯಲ್ಲಿ ಅಶ್ವಿನಿ ಗೌಡ ಕಣ್ಣೀರಿಟ್ಟಿದ್ದಾರೆ. ಇಂದು ರಾತ್ರಿ ಬಿಗ್‌ಬಾಸ್ ಮನೆಯಲ್ಲಿ ಏನು ಆಗಿದೆ ಅನ್ನೋದಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ.

ಗಿಲ್ಲಿ ಮತ್ತು ಅಶ್ವಿನಿ ಗೌಡ ಮಧ್ಯೆ ಗಲಾಟೆ ಆಗಿರೋದಂತೂ ಸತ್ಯ. ಕಲರ್ಸ್ ಕನ್ನಡ ಬೆಳಗ್ಗೆ ಪ್ರೊಮೋ ಶೇರ್ ಮಾಡಿದ್ದು, ಅದರಲ್ಲಿ ಗಿಲ್ಲಿ ಹಾಗೂ ಅಶ್ವಿನಿ ಗೌಡ ಗೇಮ್ನ ಉಸ್ತುವಾರಿ ನೀಡಲಾಗಿದೆ.

ಈ ವೇಳೆ ಸ್ಪರ್ಧಿಗಳ ನಡುವೆ ಗೇಮ್ ಆಡಿಸುವ ವಿಚಾರಕ್ಕೆ ಗಲಾಟೆ ಆಗಿದೆ. ಒಬ್ಬರಿಗೊಬ್ಬರು ಕರೆಕ್ಟ್ ಆಗಿ ಉಸ್ತುವಾರಿ ಮಾಡುವಂತೆ ಕಿರುಚಾಡಿದ್ದಾರೆ. ಆಗ ಗಿಲ್ಲಿ, ನೀನು ಕರೆಕ್ಟ್ ಆಗಿ ಮಾಡು ಎಂದಿದ್ದಾರೆ. ಅಷ್ಟಕ್ಕೆ ರೊಚ್ಚಿಗೇಳುವ ಅಶ್ವಿನಿ, ನೀನ್ಯಾರು ಅಂತಾ ಹೇಳೋಕೆ ನೀನ್ಯಾವನೋ ಎಂದು ಕೂಗಾಡಿದ್ದಾರೆ. ಆಗ ಇಬ್ಬರ ಮಧ್ಯೆ ಮಾತಿನ ಯುದ್ಧ ಜೋರಾಗಿ ನಡೆದಿದೆ. ಮಾತಿನ ಮಧ್ಯೆ ನೀನ್ಯಾವನೋ, ಯೋಗ್ಯತೆ ಎಂಬ ಪದಗಳೆಲ್ಲ ತೂರಿಕೊಂಡು ಬಂದಿವೆ.

ಇದೇ ಗಲಾಟೆಯಲ್ಲಿ ಅಶ್ವಿನಿಗೆ ಗಿಲ್ಲಿ ನೋವು ತರುವ ರೀತಿಯಲ್ಲಿ ಮಾತನ್ನಾಡಿದಂತೆ ಕಾಣ್ತಿದೆ. ಗಲಾಟೆ ಮುಗಿದ ಬಳಿಕ ಧ್ರುವಂತ್, ಜಾಹ್ನವಿ ಹಾಗೂ ಧನುಷ್ ಜೊತೆ ಅಶ್ವಿನಿ ನೋವು ಹಂಚಿಕೊಂಡಿದ್ದಾರೆ. ಒಬ್ಬ ಕಾಮಿಡಿ ನಟ ಅಂದ ಮಾತ್ರಕ್ಕೆ ಏನು ಮಾತಾಡಿದರೂ ಓಕೆನಾ? ಒಬ್ಬರನ್ನ ತೇಜೋವಧೆ ಮಾಡೋದು ಎಷ್ಟು ಸರಿ? ಅದೆಲ್ಲ ಮಾತನ್ನಾಡೋಕೆ ಆತ ಯಾರು? ನಾವು ಬದುಕುತ್ತಿರುವುದೇ ಮರ್ಯಾದಿಗೋಸ್ಕರ ಎಂದು ಬೇಸರ ಹೊರ ಹಾಕಿದ್ದಾರೆ.

ಗಿಲ್ಲಿ ಹೇಳಿದ್ದೇನು..?
ಗಾರ್ಡನ್ ಏರಿಯಾದಲ್ಲಿ ಅಶ್ವಿನಿ, ಜಾಹ್ನವಿ ಹಾಗೂ ಧ್ರುವಂತ್ ಮತ್ತು ರಾಶಿಕಾ ಒಂದು ಕಡೆ ಕೂತ್ಕೊಂಡು ಗಲಾಟೆ ವಿಚಾರವನ್ನು ಚರ್ಚೆ ಮಾಡ್ತಿರುತ್ತಾರೆ. ಅವರಿಗೆ ಕೇಳುವ ರೀತಿಯಲ್ಲಿ ಜೋರಾಗಿ.. ಎಲ್ಲರೂ ವೃದ್ಧಾಪ್ಯದವರೇ ಸೇರಿ ಹೋಗ್ತಾರೆ ಎಂದು ಕಷ್ಟಪಟ್ಟು ಕಳುಹಿಸುತ್ತ ಇದ್ದಾರೆ ಎಂದಿದ್ದಾರೆ. ವೃದ್ಧರು ಅಂತಾ ಹೇಳಿರೋದು ಅಶ್ವಿನಿಗೆ ಹರ್ಟ್ ಆದಂತೆ ಕಾಣ್ತಿದೆ.
ಇದನ್ನೂ ಓದಿ : ಸೌದಿ ಅರೇಬಿಯಾ ಬಸ್ ದುರಂತದಲ್ಲಿ ಬೀದರ್ ಮಹಿಳೆ ಸಾವು | ಪಾರ್ಥಿವ ಶರೀರ ತರಿಸಲು ಸರ್ಕಾರಕ್ಕೆ ಕುಟುಂಬಸ್ಥರ ಮನವಿ!



















