ಬಿಗ್‌ಬಾಸ್ 12ಮೊದಲಿಗೆ ಅತ್ಯಂತ ಸ್ನೇಹಿತರಾಗಿ ಇದ್ದವರು ಅಶ್ವಿನಿ ಹಾಗೂ ಜಾಹ್ನವಿ. ‘ಬಿಗ್ ಬಾಸ್’ ನೀಡಿದ ಒಂದೇ ಒಂದು ಟಾಸ್ಕ್‌ನಿಂದಾಗಿ ಇಬ್ಬರ ಮಧ್ಯೆ ಸ್ನೇಹ ಸಂಬಂಧಕ್ಕೆ ಬ್ರೇಕ್ ಬಿದ್ದಿದೆ. ಇದೀಗ ಕಣಿ ಹೇಳುವ ಮೂಲಕ ಮನದ ನೋವು ಹಂಚಿಕೊಂಡಿದ್ದಾರೆ ಜಾಹ್ನವಿ.
ನನ್ನ ಸ್ಟ್ರಾಟೆಜಿ ಬಳಸಿಕೊಂಡು ನಾನು ಇಲ್ಲಿಯವರೆಗೂ ನ್ಯಾಯಯುತವಾಗಿ ಆಟ ಆಡಿಕೊಂಡು ಬಂದಿದ್ದೇನೆ. ಜಾಹ್ನವಿ ಅವರು ಸ್ನೇಹ ಎಂಬ ತೆಕ್ಕೆಯಲ್ಲಿ ಸಿಕ್ಕಿಹಾಕಿಕೊಂಡು ಎಲ್ಲೋ ಒಂದು ಚೂರು, ಅವರ ವ್ಯಕ್ತಿತ್ವವಲ್ಲದ ವ್ಯಕ್ತಿತ್ವವನ್ನ ಪ್ರೊಜೆಕ್ಟ್ ಮಾಡ್ತಿದ್ದಾರೆ ಅನಿಸುತ್ತದೆ ಎಂದು ಹಿಂದೆ ಅಶ್ವಿನಿ ಅವರು ಗರಂ ಆಗಿದ್ದರು.
ಜಾಹ್ನವಿ ಮಾತನಾಡಿ, ಇವರಾ! ರಾಜಮಾತೆ ಅಂತ ಕರೀತಾ ಇದ್ರು. ಜಾಹ್ನವಿ ಮತ್ತು ಅಶ್ವಿನಿ ಯಾವಾಗಲೂ ಕಚ್ಚಕೊಂಡೇ ಇರ್ತಾ ಇದ್ರು. ರಾತ್ರಿಯಲ್ಲ ಗುಸು ಗುಸು ಅನ್ನೋರು. ಬೆಳಗ್ಗಿನ ಜಾವಾನೂ ಮಾತಾಡೋರು. ಈಗ ಜಾಹ್ನವಿ , ಅಶ್ವಿನಿ ದೂರ ಆಗಬಿಟ್ಟಿದ್ದಾರೆ ಎಂದಿದ್ದಾರೆ. ಅದಕ್ಕೆ ಕಾವ್ಯ ಮಾತನಾಡಿ, ಇನ್ನೂ ಅವರಿಬ್ಬರೂ ಒಂದಾಗಲ್ಲ. ಜಾಹ್ಮವಿ ವಿರುದ್ಧ ಅಶ್ವಿನಿ, ಅಶ್ವಿನಿ ವಿರುದ್ಧ ಜಾಹ್ನವಿ ಅದೇ ಭವಿಷ್ಯ ನೋಡ್ತಾ ಇರು ಎಂದಿದ್ದಾರೆ.
ಇದನ್ನೂ ಓದಿ : ಉಡುಪಿ : ನವೆಂಬರ್ 28ಕ್ಕೆ ಪ್ರಧಾನಿ ಮೋದಿ ಭೇಟಿ.. ಶ್ರೀಕೃಷ್ಣ ಕಾರಿಡಾರ್‌ಗೆ ಮನವಿ



















