ಕನ್ನಡದ ಜನಪ್ರಿಯ ರಿಯಲಿಟಿ ಶೋ ಬಿಗ್‌ಬಾಸ್ ಸೀಜನ್ ಮೊದಲಿನ ಸೀಜನ್‌ಗಳ ಹಾಗೆ ಇಲ್ಲ. ಮೊದಲೇ ಹೇಳಿದಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುತ್ತಾ ಇದೆ . ಹಾಗೆಯೇ ಈ ವಾರ ಸುದೀಪ್ ಅವರು ಟಾಸ್ಕ್ ನೀಡದೇ ಎಲ್ಲ ಸ್ಪರ್ಧಿಗಳನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಇಲ್ಲಿ ಎಲ್ಲರಿಗೂ ವ್ಯಕ್ತಿತ್ವದ ಸಮಸ್ಯೆ ಇದೆ. ಅದನ್ನು ಈ ವಾರ ಪ್ರೂವ್ ಮಾಡಿಕೊಳ್ಳಿ ಎಂದು ಹೇಳಿದ್ದರು. ಅದರಂತೆ ಈ ವಾರ ಸ್ಪರ್ಧಿಗಳು ಆಡಿದ್ದಾರೆ. ಇವತ್ತಿನ ಕಿಚ್ಚನ ಪಂಚಾಯ್ತಿ ನಡೆಯುತ್ತಿರುವಾಗಲೇ ಚಂದ್ರಪ್ರಭ ಮನೆಯಿಂದ ಆಚೆ ಬರುವಂತಿರು ಹೊಸ ಪ್ರೋಮೋ ಔಟ್ ಆಗಿದೆ.

ಮೊದಲಿಗೆ ಸ್ಪರ್ಧಿಗಳಿಗೆ ಅವರ ವ್ಯಕ್ತಿತ್ವ ತಕ್ಕಂತೆ ಬೋರ್ಡ್‌ವನ್ನು ನೀಡಬೇಕು. ಅದರಲ್ಲಿ ಗಿಲ್ಲಿ ಅವರಿಗೆ ತರಹೇವಾರಿ ಟ್ಯಾಗ್ ಬೋರ್ಡ್ ನೀಡಿದ್ದಾರೆ.ಸೊಕ್ಕು ಎನ್ನುವ ಬೋರ್ಡ್‌ವನ್ನು ಅಶ್ವಿನಿ ಅವರಿಗೆ ಸ್ಪಂದನಾ ನೀಡಿದರು. ಅತಿರೇಕ ಬೋರ್ಡ್‌ವನ್ನು ಗಿಲ್ಲಿಗೆ ಧ್ರುವಂತ್ ನೀಡಿದರೆ, ರಾಶಿಕಾ ಅರ್ಥಹೀನ ಬೋರ್ಡ್‌ವನ್ನು ಗಿಲ್ಲಿ ಅವರಿಗೆ ನೀಡಿದರು. ಚಂದ್ರಪ್ರಭ ಅವರಿಗೆ ಧನುಷ್ ಅವರು ಊಸರವಳ್ಳಿ ಬೋರ್ಡ್ ನೀಡಿದ್ದಾರೆ. ಬೇರೆ ತರಹವೇ ಕಾರಣವನ್ನು ಬೇರೆಯವರಿಗೆ ನೀಡುತ್ತಾರೆ ಎಂದರು. ಇದಾದ ಬಳಿಕ ಕಣ್ಣೀರಿಡುತ್ತಾ ಚಂದ್ರಪ್ರಭ ಅವರು ಮನೆಯಿಂದ ಆಚೆ ಹೋಗಿದ್ದಾರೆ. ಇನ್ನು ಬಿಗ್ ಬಾಸ್ ಮನೆಯ ಡೋರ್ ಕೂಡ ಓಪನ್ ಆಗಿದೆ. ಚಂದ್ರಪ್ರಭ ಅವರ ಈ ನಡೆಗೆ ಸ್ಪರ್ಧಿಗಳು ಶಾಕ್ ಆಗಿದ್ದಾರೆ.

ಇನ್ನು ನಿನ್ನೆಯ (ಶನಿವಾರ) ಬಿಗ್ ಬಾಸ್ ಸಂಚಿಕೆಯಲ್ಲಿ ಚಂದ್ರಪ್ರಭ ಅವರಿಗೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು. ಚಂದ್ರಪ್ರಭ ಅವರು ಮನೆಯಲ್ಲಿ ಗಿಲ್ಲಿ ನಟ, ಕಾವ್ಯ ಶೈವ ಅವರ ಸ್ನೇಹವನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದರು.
ಈ ವಿಷತಯದ ಕುರಿತು ಸುದೀಪ್ ಮಾತನಾಡಿ, ಚಂದ್ರಪ್ರಭ ಅವರೇ ನಿಮ್ಮ ಅಭಿಪ್ರಾಯಕ್ಕೆ ನಮ್ಮ ಗೌರವ ಇದೆ. ಅಭಿಪ್ರಾಯ ಹಂಚಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಮನುಷ್ಯನಿಗೆ ನಡೆ ನುಡಿ ತುಂಬಾ ಮುಖ್ಯ. ನಮ್ಮ ನಡೆ ಹೇಗೆ ಇರುತ್ತೋ ಹಾಗೇ ನುಡಿಯಲ್ಲಿ ಇರಬೇಕು ಎಂದು ಅವರು ಹಾಗೂ ರಿಷಾ ಇರುವ ವಿಟಿಯನ್ನು ತೋರಿಸಿದ್ದಾರೆ.
ಇದಾದ ಬಳಿಕ ಸುದೀಪ್ ಅವರು ‘ತಂಗಿ ಎಂದು ಕರೆಯುವ ನೀವು ಈ ರೀತಿಯ ವಿಚಾರಗಳನ್ನು ವೈಯಕ್ತಿಕವಾಗಿ ಕರೆದು ಹೇಳಬೇಕು. ನನ್ನ ತಂಗಿ ಆಗಿದ್ದರೆ ನಾನು ಎಲ್ಲರ ಮುಂದೆ ಬಹಿರಂಗವಾಗಿ ಈ ಬಗ್ಗೆ ಹೇಳುತ್ತಾ ಇರಲಿಲ್ಲ’ ಎಂದರು. ಆ ಬಳಿಕ ಚಂದ್ರಪ್ರಭ ಅವರು ಕ್ಷಮೆ ಕೇಳಿದರು.
ಇದನ್ನೂ ಓದಿ: ಹೈಸ್ಪೀಡ್‌ನಲ್ಲಿ ಚಲಿಸುತ್ತಿದ್ದ ರೈಲಿನ ವಿಂಡ್‌ಸ್ಕ್ರೀನ್‌ಗೆ ಡಿಕ್ಕಿ ಹೊಡೆದ ಹದ್ದು | ಲೋಕೋ ಪೈಲಟ್‌ಗೆ ಗಾಯ!



















