ಗಿಲ್ಲಿ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಕೆಲಸ ,ಮಾಡೋದು ಅಂದ್ರೆ ಆಗೋದೇ ಇಲ್ಲ.ಕಿಚ್ಚನ ಪಂಚಾಯಿತಿಯಲ್ಲೂ ಈ ವಿಚಾರ ಬಂದಿತ್ತು. ಆದರೀಗ ಕ್ಯಾಪ್ಟನ್ ರಘು ಅವರು ಗಿಲ್ಲಿ ಬೆನ್ಬಿಡದೇ ಟಾರ್ಚರ್ ನೀಡುತ್ತಿದ್ದಾರೆ. ಆದರೀಗ ಕ್ಯಾಪ್ಟನ್ ರಘು ಅವರ ಕಾಟಕ್ಕೆ ಗಿಲ್ಲಿ ಸುಸ್ತಾಗಿದ್ದಾರೆ.
ಗಿಲ್ಲಿ ಅವರು ತಮಾಷೆ ಮೂಲಕವೇ ಹೈಲೈಟ್ ಆದವರು. ಇತ್ತೀಚೆಗೆ ಗಿಲ್ಲಿ ಹಾಗೂ ರಘು ಅವರ ತಮಾಷೆಯನ್ನು ವೀಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ಇವರಿಬ್ಬರ ಕಿತಾಪತಿಗೆ ‘ಮೋಟು ಪತ್ಲು’ ಜೋಡಿ ಎಂದೇ ಕರೆಯುತ್ತಿದ್ದಾರೆ.
ಗಿಲ್ಲಿ ನಟನ ಬಳಿ ಕೆಲಸ ಮಾಡಿಸಿದ್ದಾರೆ. ಈ ಟಾರ್ಚರ್ಗೆ ಗಿಲ್ಲಿ ನಟ ಹೈರಾಣಾಗಿ ಹೋಗಿದ್ದಾರೆ. ಗಿಲ್ಲಿ ಎಲ್ಲೇ ಕುಳಿತುಕೊಂಡರೂ ಅವರನ್ನ ಬಿಡುತ್ತಿಲ್ಲ ರಘು. ಟೇಬಲ್‌ನಿಂದ ಹಿಡಿದು ಎಲ್ಲವೂ ಕ್ಲೀನ್ ಆಗಬೇಕು ಎಂದು ಆರ್ಡರ್ ಮಾಡಿದ್ದಾರೆ. ಗಿಲ್ಲಿ ಕೂಡ ಪೊರಕೆ ಹಿಡಿದುಕೊಂಡೇ ಓಡಾಡುತ್ತಿದ್ದಾರೆ. ಎದೆ ಮೇಲೆ ಕಾಲು ಹಾಕಿ ಹಿಂಸೆ ಕೊಡ್ತಾ ಇದ್ದಾನೆ ಅಂತ ಗಿಲ್ಲಿ ತಮಾಷೆ ಮಾಡಿದ್ದಾರೆ. ಅಷ್ಟೇ ಅಲ್ಲ ಬೇರೆ ಅವರಿಗೆ ಪ್ರೀತಿಯಿಂದ ಮಾತನಾಡಿಸಿದಂತೆ, ನನಗೂ ಪ್ರೀತಿಯಿಂದ ಮಾತನಾಡಿಸಿ ಅಂತ ಕಾಲೆಳೆದಿದ್ದಾರೆ ಗಿಲ್ಲಿ.
ಇದನ್ನೂ ಓದಿ : ಇನ್ನೂ ಸಮತೋಲನ ಕಲಿಯುತ್ತಿದ್ದೇನೆ”: ಮೂರೂ ಮಾದರಿಯ ಕ್ರಿಕೆಟ್‌ನ ಸವಾಲುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ಶುಭಮನ್ ಗಿಲ್!


















