ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ನಮ್ಮ ನಾಯಕರು. ಪಕ್ಷದ ಅಧ್ಯಕ್ಷರು. ಅವರಿಗೆ ನಾವು ತಪ್ಪು ಮಾಡಿದಾಗ ಶಿಸ್ತು ಕ್ರಮ ತೆಗೆದುಕೊಳ್ಳುವ ಅಧಿಕಾರ ಇದೆ. ನಾನು ನನ್ನ ಹೇಳಿಕೆಗೆ ಈಗಲೂ ಬದ್ದ ಇದ್ದೇನೆ. ಶಿಸ್ತನ್ನು ಉಲ್ಲಂಘನೆ ಮಾಡಬಾರದು. ಇದು ಹೈಕಮಾಂಡ್‌ಗೆ ಸಂಬಂಧಿಸಿದ ವಿಚಾರ ಎಂದು ಹೇಳಿದ್ದಾರೆ.
ನನ್ನಲ್ಲಿ ಏನಿತ್ತೋ ಅದನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ. ನಾನು ಇನ್ನು ಮುಂದೆ ಹೇಳಿಕೆ ಕೊಡಲ್ಲ ಅಂತಾ ಹೇಳಿದ್ದೇನೆ. ನೋಟೀಸ್‌ಗೆ ಉತ್ತರ ಕೊಡುತ್ತೇನೆ. ಅರಸು ನಂತರ ಸಿಎಂ ಆಗಿ ಸಿದ್ದರಾಮಯ್ಯ ಮಾಡಿರುವ ಕೆಲಸವನ್ನು ಯಾರು ಮಾಡಲು ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಪರ ಇಕ್ಬಾಲ್ ಹುಸೇನ್ ಬ್ಯಾಟ್ ಬೀಸಿದ್ದಾರೆ.


















