ಎಸ್ ಎಸ್ ಖಾದ್ರಿ ಎಂಬ ಮುಸ್ಲಿಂ ಮುಖಂಡ ನಿನ್ನೆ ಮಾಧ್ಯಮದೆದುರು ಯತ್ನಾಳ್ ಮೇಲೆ ಹರಿಹಾಯ್ದು, ತೆಪ್ಪಗಿರದಿದ್ದರೇ, ನವೆಂಬರ್ ಆರಕ್ಕೆ ಸಿಡಿ ಬಿಡುಗಡೆಯಾಗಲಿದೆ ಎಂದು ಎಚ್ಚರಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಖಡಕ್ ವಾಗ್ದಾಳಿ ಮಾಡಿದರು.
ವಕ್ಫ್ ಆಸ್ತಿ ಹೆಸರಲ್ಲಿ ಗಡಿಪಾರಾಗಿದ್ದ ಖಾದ್ರಿ ಲೂಟಿಕೋರ ಸಿಡಿ ಬಿಡುಗಡೆ ಮಾಡುವ ಬಗ್ಗೆ ಮಾತಾಡಿದ್ದು ಕೇಳಿದ್ದೇನೆ. ಈ ಹಿಂದೆಯೂ ನಾನು ಹೇಳಿದಂತೆ, ಅವರ ಅಪ್ಪನಿಗೆ ಹುಟ್ಟಿದವರಿದ್ದರೇ ಸಿ.ಡಿ. ಬಿಡುಗಡೆ ಮಾಡಲಿ ಎಂದರು. ಇಂಥ ಅಯೋಗ್ಯರ ಹೇಳಿಕೆಯನ್ನು ಕೆಲ ಮಾಧ್ಯಮ ವೈಭವೀಕರಿಸುತ್ತಿದೆ. ಈ ಬಗ್ಗೆ ಮಾನಹಾನಿಯ ಜೊತೆ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇನೆ ಎಂದು ಎಚ್ಚರಿಸಿದರು.