ಬೆಂಗಳೂರು: ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ವಿಚಾರವನ್ನು ಧಾರ್ಮಿಕ ಮತ್ತು ಕಾನೂನಾತ್ಮಕವಾಗಿ ನೋಡುವ ದೃಷ್ಟಿಕೋನಗಳು ಬೇರೆ ಆಗುತ್ತದೆ ಎಂದು ಮಾಜಿ ಶಾಸಕ ಪಿ ರಾಜೀವ್ ಹೇಳಿದ್ದಾರೆ.
ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿರುದ್ಧ ಸಲ್ಲಿಕೆ ಆಗಿದ್ದ ಕೋರ್ಟ್ ಅರ್ಜಿ ವಜಾ ವಿಚಾರದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿ ರಾಜೀವ್, ಪ್ರತಾಪ್ ಸಿಂಹ ಅವರು ವೈಯಕ್ತಿಕವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪಕ್ಷದ ವತಿಯಿಂದ ನ್ಯಾಯಾಲಯದ ಮೊರೆ ಹೋಗುವ ಅವಶ್ಯಕತೆ ಇರಲಿಲ್ಲ ಅವರು ಅವರ ವೈಯಕ್ತಿಕ ಪ್ರಕರಣವನ್ನು ದಾಖಲು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಧಾರ್ಮಿಕ ಭಾವನೆಗೆ ನಿಮ್ಮಿಂದ ಪೆಟ್ಟಾಗಿದ್ದು, ನೀವು ಚಾಮುಂಡೇಶ್ವರಿನ ಶಕ್ತಿ ಸ್ವರೂಪಿಣಿಯೆಂದು ಒಪ್ಪಿಕೊಳ್ಳುತ್ತೀರಾ. ಕುಂಕುಮ ಮತ್ತು ಅರಿಶಿಣಕ್ಕೆ ಮಾಡಿರುವ ಅಪಮಾನವನ್ನು ಹಿಂತೆಗೆದುಕೊಳ್ಳುತ್ತೀರಾ. ನಮ್ಮ ಧಾರ್ಮಿಕ ಶ್ರದ್ಧೆಯ ಆಚರಣೆಯ ಬಗ್ಗೆ ನಿಮ್ಮಗೆ ನಂಬಿಕೆ ಇದೆಯಾ ಇದು ಅಷ್ಟೇ ನಮ್ಮ ಪ್ರಶ್ನೆ ಎಂದು ಬಾನು ಮುಸ್ತಾಕ್ ಅವರನ್ನು ಪ್ರಶ್ನೆ ಮಾಡಿದ್ದಾರೆ.
ನಾನು ಹಿಂದೂ ಆಚರಣೆ ಗೌರವ ನೀಡುತ್ತೇನೆ. ಹಿಂದೂ ಆಚರಣೆ ಸಂಸ್ಕೃತಿಯನ್ನು ಗೌರವ ನೀಡುತ್ತೇನೆ ಎಂದರೆ ನಮ್ಮದು ಯಾವುದೇ ಬಿನ್ನಾಬಿಪ್ರಾಯ ಇಲ್ಲ. ನೀವು ಭುವನೇಶ್ವರಿ ಬಗ್ಗೆ ವ್ಯಕ್ತಪಡಿಸಿದ ಭಾವನೆಯಿಂದ ಹಿಂದೂಗಳ ಭಾವನೆಗೆ ದಕ್ಕೆ ಆಗಿದೆ ಎಂದು ತಿಳಿಸಿದ್ದಾರೆ.